ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ 37ವರ್ಷಗಳಿಂದ ಸಿಂಡಿಕೇಟ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದು ಇತ್ತೀಚೆಗೆ ಕುಂದಾಪುರ ಮುಖ್ಯ ಶಾಖೆಯಲ್ಲಿ ನಿವೃತ್ತಿ ಹೊಂದಿದ ಜಿ. ಮಂಜುನಾಥ್ ಅವರನ್ನು ಮುಖ್ಯ ಶಾಖೆಯಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಕೊಳ್ಳಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಹಾಯಕ ಪ್ರಬಂಧಕಿ ಪೂನಮ್ ಪ್ರಭು ವಹಿಸಿದ್ದರು. ವಿಶೇಷ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಉಪ ಮಹಾ ಕಾರ್ಯದರ್ಶಿ ರಾಮ ಮೋಹನ್ ಮತ್ತು ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷರಾದ ರಾಘವೇಂದ್ರ ರಾವ್ ಆಗಮಿಸಿದ್ದರು.
ಶಾಖೆಯ ವತಿಯಿಂದ ಜಿ. ಮಂಜುನಾಥ್ ದಂಪತಿಗಳಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಸನ್ಮಾನಿಸಲಾಯಿತು. ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ವಿವಿಧ ಸ್ತರಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ಜಿ. ಮಂಜುನಾಥ್ ಅವರನ್ನು ರಾಷ್ಟ್ರೀಯ ಉಪ ಮಹಾ ಕಾರ್ಯದರ್ಶಿ ರಾಮ ಮೋಹನ್ ಸನ್ಮಾನಿಸಿದರು. ಕಿಶೋರ್, ಪ್ರಸನ್ನ, ಭೋಜರಾಜ ಶೆಟ್ಟಿ ಮಾತನಾಡಿ ಜಿ. ಮಂಜುನಾಥ್‌ರ ಸೇವಾ ತತ್ಪರತೆಯನ್ನು ಪ್ರಶಂಶಿಸಿದರು.
ನಿತ್ಯಾನಂದ ತೋಳಾರ್ ಅತಿಥಿಗಳನ್ನು ಸ್ವಾಗತಿಸಿದರು. ಗೋಪಾಲಕೃಷ್ಣ ಕುಂಭಾಸಿ ಕಾರ್ಯಕ್ರಮವನ್ನು ನಿರ್ವಹಿಸಿ ಗಣೇಶ್ ವಂದಿಸಿದರು.