ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೆಮ್‌ಶೆಡ್‌ಪುರದಲ್ಲಿ ನಡೆದ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ತಾಲೂಕಿನ ಬಾಳಿಕೆರೆಯ ವಿಶ್ವನಾಥ ಗಾಣಿಗ ಅವರು ಎರಡು ಚಿನ್ನದ ಪದಕ ಗೆಲ್ಲುವ ಮೂಲಕ ಪವರ್ ಲಿಫ್ಟಿಂಗ್ ಹಾಗೂ ಡೆಡ್‌ಲಿಫ್ಟಿಂಗ್‌ನಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ಸ್ ಗೌರವಕ್ಕೆ ಪಾತ್ರರಾಗಿದ್ದಾರೆ. ೮೩ಕೆ.ಜಿ ವಿಭಾಗದಲ್ಲಿ ಸ್ವರ್ಧಿಸಿದ್ದ ವಿಶ್ವನಾಥ್ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದಲ್ಲದೇ ಡೆಡ್‌ಲಿಫ್ಟ್‌ನಲ್ಲಿ ಅಗ್ರ ಸ್ಥಾನಿಯಾಗಿದ್ದರು.
ಸುಬ್ರತಾ ಕ್ಲಾಸಿಕ್ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್‌ನಲ್ಲಿ ಬೆಸ್ಟ್ ಲಿಫ್ಟರ್ ಗೌರವಕ್ಕೂ ವಿಶ್ವನಾಥ್ ಪ್ರಾತ್ರರಾದರು. ಬೆಂಗಳೂರಿನ ಸೂಪರ್ ಬಾಡೀಸ್ ಹಾಗೂ ರೆಡ್ ಕೇಜ್ ಜಿಮ್‌ನಲ್ಲಿ ವಿಶ್ವನಾಥ್ ತರಬೇತಿ ಪಡೆಯುತ್ತಿದ್ದಾರೆ.