Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಬ್ಯೂಟಿಶಿಯನ್ ತರಬೇತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಹಾಕಾಳಿ ಮಹಿಳಾ ಮಂಡಳಿ (ರಿ) ಖಾರ್ವಿಕೇರಿ ಕುಂದಾಪುರ ಇದರ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತವಾಗಿ ಬ್ಯೂಟಿಶಿಯನ್ ತರಬೇತಿ ಶಿಬಿರವನ್ನು ಶ್ರೀ ಮಹಾಕಾಳಿ ದೇವಸ್ಥಾನ ವಠಾರದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಳಿಯ ಅಧ್ಯಕ್ಷರಾದ ಕಸ್ತೂರಿ ಡಿ ಪಟೇಲ್ ವಹಿಸಿದ್ದರು.
ಸಮಾರಂಭದ ಉದ್ಘಾಟನೆಯನ್ನು ಅಂಬಿಕಾ ಧೀರಜ್ ನೆರವೇರಿಸಿ, ಸೌಂದರ್ಯವು ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಕಿಯೋನಿಕ್ಸ್ ಸಂಸ್ಥೆಯ ಧೀರಜ್, ರೋಟರಿ ಕ್ಲಬ್ ಸನ್‌ರೈಸ್‌ನ ಮಾಜಿ ಅಧ್ಯಕ್ಷರಾದ ದಿನಕರ ಪಟೇಲ್ ಹಾಗೂ ಬ್ಯೂಟಿಶಿಯನ್ ತರಬೇತುದಾರರಾದ ಶ್ರೀಮತಿ ರತ್ನ ತೇಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮ ವಿ. ಸ್ವಾಗತಿಸಿದರು. ಶ್ರೀಮತಿ ಗೀತಾ ವಸಂತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರೂಪಾ ಎಂ. ಸಹಕರಿಸಿದರು.

Exit mobile version