Site icon Kundapra.com ಕುಂದಾಪ್ರ ಡಾಟ್ ಕಾಂ

ಗೋಳಿಹೊಳೆ: ಅವಿವಾಹಿತನೊರ್ವ ನೇಣಿಗೆ ಶರಣು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೀವನದಲ್ಲಿ ಜಿಗುಪ್ಸೆಗೊಂಡ ಅವಿವಾಹಿತನೊರ್ವ ನೇಣಿಗೆ ಶರಣಾದ ಘಟನೆ ಎಲ್ಲೂರಿನಲ್ಲಿ ವರದಿಯಾಗಿದೆ. ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಎಲ್ಲೂರಿನ ನಿವಾಸಿ ರಾಮಕೃಷ್ಣ ಶೆಟ್ಟಿ (೨೮) ಮೃತಪಟ್ಟ ಯುವಕ.

ಖಾಸಗಿ ಬಸ್ಸಿನಲ್ಲಿ ಕ್ಲೀನರ್ ಅಗಿ ಕೆಲಸ ಮಾಡಿಕೊಂಡಿದ್ದ ರಾಮಕೃಷ್ಣ, ಇತ್ತೀಚಿಗೆ ಮನಸಿಕ ಖಿನ್ನತೆಗೆ ವಿಪರೀತ ಮದ್ಯವ್ಯಸನಿಯಾಗಿದ್ದ ಎನ್ನಲಾಗಿದೆ. ಶನಿವಾರ ಕೆಲಸಕ್ಕೆ ತೆರಳದೇ ಮನೆಯಲ್ಲಿಯೇ ಇದ್ದ ಎನ್ನಲಾಗಿದೆ. ರಾತ್ರಿ ಕಾಣದಾದಾಗ ಮನೆಯವರು ಹುಡುಕುದಾಗ ಪಕ್ಕದ ಗೇರುಹಾಡಿಯಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಒದ್ದಾಡುತ್ತಿದ್ದ. ಅದನ್ನು ನೋಡಿದವರು ಆತನನ್ನು ಮರದಿಂದ ಇಳಿಸಿದಾಗ ಸ್ವಲ್ಪ ಉಸಿರಾಟವಿರುವುದನ್ನು ಗಮನಿಸಿ ತಕ್ಷಣ ಬೈಂದೂರು ಅಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version