Kundapra.com ಕುಂದಾಪ್ರ ಡಾಟ್ ಕಾಂ

ವಿಚಾರ ಸಂಕಿರಣ: ಬೆರ್ಟೋಲ್ಟ್ ಬ್ರೆಕ್ಟ್ ಬಗ್ಗೆ ತಿಳಿದುಕೊಳ್ಳೋಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರೀಡರ್ಸ್ ಆಂಡ್ ರೈಟರ್ಸ್ ಕ್ಲಬ್ ಮತ್ತು ಡಾ.ಹೆಚ್.ಶಾಂತಾರಾಂ ಕನ್ನಡ ಸಾಹಿತ್ಯ ವೇದಿಕೆಯ ಜಂಟಿ ಆಶ್ರಯದಲ್ಲಿ ಒಂದು ದಿನದ ವಿಚಾರಸಂಕಿರಣ ಬೆರ್ಟೋಲ್ಟ್ ಬ್ರೆಕ್ಟ್ ಬಗ್ಗೆ ತಿಳಿದುಕೊಳ್ಳೋಣ ಕುರಿತು ಒಂದು ದಿನದ ವಿಚಾರಸಂಕಿರಣ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್ ಮಾತನಾಡಿ ಜರ್ಮನಿ ದೇಶದ ತ್ಂತ್ರಜ್ನರ ಕಾರ್ಯವೈಖರಿಯನ್ನು ಸಮಯಪ್ರಜ್ನೆಯನ್ನು ಹೊಗಳಿ ಕಾರ‍್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ದಿಕ್ಚೂಚಿ ಭಾಷಣ ಮಾಡಿ ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ಡಾ.ಟಿ.ಕೆ.ರವೀಂದ್ರನ್ ಮಾತನಾಡಿ ಬಂಡವಾಳಶಾಹಿಯ ಒಡಲಲ್ಲೆ ಅಂತರ್ಗತವಾಗಿರುವ ಜರ್ಮನಿಯಂತಹ ದೇಶದಲ್ಲಿನ ಆಗಿನ ಸನ್ನಿವೇಶವನ್ನು ಕುರಿತಂತೆ ಅಲ್ಲಿನ ಲೇಖಕ ಬ್ರೆಕ್ಟ್‌ನ ಬರಹಗಳು ಮುಖಾಮುಖಿಯಾಗಿವೆ. ಅವನ ಬದುಕು ಬರಹ ಮತ್ತು ಅದ್ಭುತ ನಾಟಕಗಳು ಸಂವೇದನಾಶೀಲವಾಗಿ ವಸ್ತುನಿಷ್ಠವಾಗಿ ಹುಟ್ಟಿಕೊಂಡಿದ್ದು ಇದೇ ಯುರೋಪಿಯನ್ ಸಮಾಜವಾದ, ಬಂಡವಾಳಶಾಹಿ ದೇಶಗಳಲ್ಲಿ. ಆಗಿನ ಯುರೋಪಿಯನ್ ದೇಶಗಳ ಒಡಲಲ್ಲಿ ಮಾಹಾಯುದ್ಧಗಳು, ಅರಾಜಕತೆ, ಸರ್ವಾಧಿಕಾರ, ನಾಜಿ ಸಿದ್ಧಾಂತ, ಬಾಂಬಿನ ಸದ್ದುಗಳ ಪ್ರಭಾವ ಎಷ್ಟಿತ್ತೆಂದರೆ ಅವನ ನಾಟಕಗಳಲ್ಲಿ ಅದುವೆ ವಸ್ತುವಿಷಯಗಳಾಗಿ ಅದ್ಭುತ ನಾಟಕಗಳಾಗಿ ಹುಟ್ಟಿಕೊಂಡವು. ಅವನ ವ್ಯಕ್ತಿತ್ವಕ್ಕೆ ತಕ್ಕಂತೆ ಅವನ ಬರಹಗಳು ನಿರ್ಭೀತವಾಗಿದ್ದವು. ನೇರ ನಡೆನುಡಿಯ ಕಾರಣದಿಂದಾಗಿ ಸಮಾಜದ ಅಧಿಕಾರವಂತರ ಕೆಂಗೆಣ್ಣಿಗೆ ಗುರಿಯಾಗಬೇಕಾಯಿತು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ರೀಡರ್ಸ್ ಆಂಡ್ ರೈಟರ್ಸ್ ಕ್ಲಬ್‌ನ ಸಂಯೋಜಕರಾದ ಡಾ.ಹಯವದನ ಉಪಾಧ್ಯಾಯ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಡಾ.ಪಾರ್ವಾತಿ ಜಿ. ಐತಾಳ್ ವಂದಿಸಿದರು. ವಿದ್ಯಾರ್ಥಿನಿ ಶೃದ್ಧಾ ಕಾರ‍್ಯಕ್ರಮ ನಿರ್ವಹಿಸಿದರು.

Exit mobile version