Kundapra.com ಕುಂದಾಪ್ರ ಡಾಟ್ ಕಾಂ

ದುಬೈ: 5ನೇ ವರ್ಷದ ಶ್ರೀ ಶನೈಶ್ಚರ ಪೂಜೆ ಸಂಪನ್ನ

ದುಬೈ:  ಶ್ರೀ ಶನೈಶ್ಚರ ಸೇವಾ ಸಮಿತಿ ದುಬೈ ವತಿಯಿಂದ  ಶುಕ್ರವಾರ ಅಪರಾಹ್ನ 3.00 ಗಂಟೆಯಿಂದ ದುಬಾಯಿ ಶೇಖ್ ಜಾಯಿದ್ ರಸ್ತೆಯ ಬಳಿ ಗಲ್ಫ್ ನ್ಯೂಸ್ ಹಿಂಬಾಗದಲ್ಲಿ ಅಲ್ ಸಫಾದಲ್ಲಿರುವ ಜೆ. ಎಸ್. ಎಸ್. ಪ್ರವೈಟ್ ಸ್ಕೂಲ್ ಸಭಾಂಗಣದಲ್ಲಿ ಶ್ರೀ ಶನೈಶ್ಚರ ಪೂಜೆ ವಿಜೃಂಬಣೆಯಿಂದ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಬಂಧುಗಳು ಪಾಲ್ಗೊಂಡು ಪುನೀತರಾದರು.

News gulf Dubai-Shanishtura-pooje

ಶ್ರೀ ವಿಠಲ್ ಶೆಟ್ಟಿಯವರ ಸ್ವಾಗತದೊಂದಿಗೆ ಪೂಜಾ ಕಾರ್ಯ ಪ್ರಾರಂಭವಾಯಿತು. ಮುಂಬೈನಿಂದ ಆಗಮಿಸಿದ ಪುರೋಹಿತರಾದ ಶ್ರೀ ಎಂ. ಜೆ. ಪ್ರವೀಣ್ ಭಟ್ ಪೂಜಾ ವಿದಿವಿಧಾನಗಳನ್ನು ಕಳಸ ಪ್ರತಿಷ್ಠಾಪನೆ, ಸಂಕಲ್ಪದೊಂದಿಗೆ ಪೂಜಾ ಕೈಂಕರ್ಯವನ್ನು ನಡೆಸಿಕೊಟ್ಟರು. ವಿವಿಧ ಸಂಘ ಸಂಸ್ಥೆಯ ಭಜನಾ ತಂಡದವರಿಂದ ಸುಶ್ರಾವ್ಯ ಭಜನೆ ಕಾರ್ಯಕ್ರಮ ನಡೆಯಿತು.

Exit mobile version