Kundapra.com ಕುಂದಾಪ್ರ ಡಾಟ್ ಕಾಂ

ಮೂರು ವರ್ಷದಲ್ಲಿ ಪೊಲೀಸರ ಭಡ್ತಿ, ಭತ್ಯೆ ಪ್ರಮಾಣ ಹೆಚ್ಚಳ: ಸಚಿವ ಡಾ. ಪರಮೇಶ್ವರ್

ಗಂಗೊಳ್ಳಿಯಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆ ನೂತನ ಕಟ್ಟಡ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ದೇಶದ ಕರಾವಳಿಯ ರಕ್ಷಣೆಯ ಮಹತ್ವದ ಅರಿವಾಗಿದೆ. ಸೈನಿಕ ಪಡೆ ಬಾಹ್ಯ ದಾಳಿಯ ವಿರುದ್ಧ ನೀಡುವ ರಕ್ಷಣೆಯ ಜತೆಗೆ ಆಂತರಿಕ ರಕ್ಷಣೆಗೆ ಪ್ರತ್ಯೇಕ ವ್ಯವಸ್ಥೆ ಬೇಕು ಎನ್ನುವುದರ ಅರಿವಾಗಿದೆ. ಅದಕ್ಕಾಗಿ ಕರಾವಳಿ ಕಾವಲು ಪೊಲೀಸ್ ಪಡೆಯನ್ನು ಹುಟ್ಟುಹಾಕಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ಗಂಗೊಳ್ಳಿ ಮೀನುಗಾರಿಗಾ ಬಂದರು ಪ್ರದೇಶಲ್ಲಿ ರೂ ೪೮ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕಾವಲು ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕರಾವಳಿ ಪೊಲೀಸ್ ಪಡೆಗೆ ಹಲವು ಜವಾಬ್ದಾರಿಗಳಿವೆ. ಕಡಲಿನಲ್ಲಿ ಅಪಾಯಕ್ಕೆ ಈಡಾಗುವ ಮೀನುಗಾರರ ಮತ್ತು ಬೋಟ್‌ಗಳ ರಕ್ಷಣೆ, ನುಸುಳಿ ಬರುವ ಭಯೋತ್ಪಾದಕರ, ಕಳ್ಳ ಸಾಗಣೆದಾರರ ಪತ್ತೆ ಮತ್ತು ಸಮುದ್ರ ಹಾಗೂ ಕರಾವಳಿ ಅಂಚಿನಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ತಡೆ ಅದರ ಹೊಣೆ. ಇದಕ್ಕಾಗಿ ಅದಕ್ಕೆ ಎಲ್ಲ ಆಧುನಿಕ ಸಲಕರಣೆಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪೊಲೀಸರ ವೇತನ ಮತ್ತು ಭತ್ಯೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಗತ್ಯ ಸಂಖ್ಯೆಯ ಪೊಲೀಸರನ್ನು ನೇಮಕ ಮಾಡಲಾಗುತ್ತಿದೆ. ಅವರಿಗೆ ಅವಧಿಬದ್ಧ ಬಡ್ತಿ ನೀಡಲೂ ನಿರ್ಧರಿಸಲಾಗಿದೆ. ಫೆ.೧ರಿಂದ ೨,೦೦೦ ಭತ್ಯೆಯನ್ನೂ ನೀಡಲಾಗುತ್ತಿದೆ ಎಂದರು. ಹೀಗೆ ನೀಡಲಾಗುತ್ತಿರುವ ಸೌಲಭ್ಯಗಳಿಗೆ ಪ್ರತಿಯಾಗಿ ಪೊಲೀಸರು ಶಿಸ್ತಿನಿಂದ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಸೂಚಿಸಿದ ಅವರು ಕರಾವಳಿ ಕಾವಲು ಪೊಲೀಸ್ ಠಾಣೆಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಉಡುಪಿಯಲ್ಲಿ ಮರೈನ್ ಪೊಲೀಸ್ ಟ್ರೈನಿಂಗ್ ಅಕಾಡೆಮಿ ಸ್ಥಾಪಿಸಲು ಚಿಂತಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಕ ಕೆ. ಗೋಪಾಲ ಪೂಜಾರಿ ಮಾತನಾಡಿ ಪೊಲೀಸರ ವೇತನ ಹೆಚ್ಚಳ, ಕರಾವಳಿ ಕಾವಲು ಪೊಲೀಸರಿಗೆ ಹ್ಯಾಲಿಕಾಪ್ಟರ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆ, ಸಮುದ್ರದಲ್ಲಿ ಕೆಲಸ ಮಾಡಬಲ್ಲ ಮೀನುಗಾರ ಯುವಕರಿಗೆ ಈ ಪಡೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.

ಗಂಗೊಳ್ಳಿ ಕಾವಲು ಠಾಣೆಯ ಇನ್ಸ್‌ಪೆಕ್ಟರ್ ಜಿ. ಎಂ. ರಾಯ್ಕರ್ ಪ್ರಾರ್ಥನೆ ಹಾಡಿದರು. ಈಲ್ಲಾ ಪೊಲೀಸ್ ಅಧೀಕ್ಷಕ ಕೆ. ಟಿ. ಬಾಲಕರಷ್ಣ ಸ್ವಾಗತಿಸಿದರು. ಆಂತರಿಕ ಭದ್ರತಾ ವಿಭಾಗದ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು ಪ್ರಾಸ್ತಾವಿಕ ಭಾಷಣ ಮಾಡಿದರು. ಉಫಾಧೀಕ್ಷಕ ಟಿ. ಆರ್. ಜೈಶಂಕರ್ ವಂದಿಸಿದರು. ಕಂಟ್ರೋಲ್ ರೂಮ್ ಸಿಬ್ಬಂದಿ ಬಿ. ಮನಮೋಹನ ರಾವ್ ನಿರೂಪಿಸಿದರು. ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ, ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ ಹರಿಶೇಖರನ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಎ. ಗಫೂರ್, ನಿರ‍್ಮಿತಿ ಕೇಂದ್ರದ ಯೋಜನಾ ನಿರ್ದೇಅರುಣ್‌ಕುಮಾರ್, ಗ್ರಾಮ ಪಂಚಾಯಿತಿಆಡಳಿತಾಧಿಕಾರಿ ಕೆ.ಸೀತಾರಾಮ ಶೆಟ್ಟಿ, ಇತರರು ಇದ್ದರು.

Exit mobile version