ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ರಿಕೆಟ್ ಜೊತೆ ಗ್ರಾಮೀಣ ಭಾಗದ ಕ್ರೀಡೆ ಹಾಗೂ ಜಾನಪದ ಕ್ರೀಡೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ಕ್ರೀಡೆ ಸಹೋದರತೆ, ಭಾತೃತ್ವ, ಸಮಾನತೆ ಹಾಗೂ ಬಾಂಧವ್ಯ ವೃದ್ಧಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳ ಮೂಲಕ ಸೌಹಾರ್ಧ ಸಮ್ಮವರ್ಧನೆ ಸಾಧ್ಯ. ದೈಹಿಕ ಕ್ಷಮತೆ ಜೊತೆ ಕೌಶಲ್ಯ ವೃದ್ಧಿಗೂ ಕಾರಣವಾಗುತ್ತದೆ ಎಂದು ಉದ್ಯಮಿ ಹರ್ಕೂರು ಕಟ್ಟಿನಮಕ್ಕಿ ಚಿತ್ತರಂಜನ್ ಹೆಗ್ಡೆ ಅಭಿಪ್ರಾತ ಪಟ್ಟಿದ್ದಾರೆ.
ಮುಳ್ಳಿಕಟ್ಟೆ ಅಂಬಾ ಕ್ರಿಕೆಟರ್ರ‍್ಸ್ ಆಶ್ರಯದಲ್ಲಿ ಹೊಸಾಡು ಮುಳ್ಳಿಕಟ್ಟೆಯಲ್ಲಿ ಎರಡು ದಿನ ನಡೆಯುವ ಹತ್ತೊಂಬತ್ತನೇ ವರ್ಷದ ಅಂಬಾ ಟ್ರೋಪಿ-೨೦೧೭ ಉದ್ಘಾಟಿಸಿ ಮಾತನಾಡುತ್ತಿದ್ದರು. ಯಾವುದೇ ಆಟೋಟಕಗಳ ಆರಂಭಿಸುವುದು ಸುಲಭವಾದರೆ, ಅದನ್ನು ಮುಂದುವರಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಆದರೆ ಅಂಬಾ ಕ್ರಿಕೆಟರ್ರ‍್ಸ್ ೩೦ಗಜಗಳ ಆಂಡರ್ ಆರ್ಮ್ ಸೀಮಿತ ಓವರ್ ಕ್ರಿಕೆಟ್ ಪಂದ್ಯ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಗ್ರಾಮ ಭಾಗದಲ್ಲಿ ಪಂದ್ಯ ನಡೆಯುವುದರಿಂದ ಸ್ಥಳೀಯ ಆಟಗಾರರಿಗೆ ಉತ್ತೇಜನ ನೀಡುವ ಜೊತೆ, ಪರಿಸರದ ಜನರಿಗೆ ಮನೋರಂಜನೆ ಒದಗಿಸಿದಂತೆಯೂ ಆಗುತ್ತದೆ ಎಂದು ಬಣ್ಣಿಸಿದರು.
ಅಂಬಾ ಟ್ರೋಪಿ ಸಂಯೋಜಕ ಸುಧಾಕರ ಶೆಟ್ಟಿ, ಉದ್ಯಮಿ ಪ್ರದೀಪ ಆಚಾರ್ಯ, ಶರತ್ ಶೆಟ್ಟಿ, ಕ್ರಿಕೆಟ್ ಪಂದ್ಯಾಟ ವ್ಯವಸ್ಥಾಪಕ ಹೊಸಾಡು ಗ್ರಾಪಂ ಸದಸ್ಯ ಸೀತಾರಾಮ ಶೆಟ್ಟಿ, ಅಂಬಾ ಕ್ರಿಕೆಟರ್ರ‍್ಸ್ ತಂಡ ನಾಯಕ ಸತೀಶ್ ದೇವಾಡಿಗ, ಪದಾಧಿಕಾರಿಗಳಾದ ರಾಘವೇಂದ್ರ ಶೆಟ್ಟಿ, ಜೀವನ್ ಶೆಟ್ಟಿ,ವಿಶ್ವನಾಥ ಶೆಟ್ಟಿ, ಮಂಜುನಾತ ದಿನಕರ, ಸ್ಟ್ಯಾನ್ಲಿ, ಸದಾಶಿವ ಶೆಟ್ಟಿ, ಅಂಬಾ ಕ್ರಿಕೆಟ್ ತಂಡದ ಸದಸ್ಯರು ಇದ್ದರು. ಅಂಬಾ ಕ್ರಿಕೆಟರ್ರ‍್ಸ್‌ನ ಅಜಿತ್ ಸ್ವಾಗತಿಸಿ, ನಿರೂಪಿಸ, ವಂದಿಸಿದರು.