Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಜ್ಯೂನಿಯರ್ ಜೆ.ಸಿ.ಐ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೆ.ಸಿ.ಐ ಕುಂದಾಪುರದ ಜ್ಯೂನಿಯರ್ ಜೆ.ಸಿ.ಐ 2017 ರ ಸಾಲಿನ ಅಧ್ಯಕ್ಷರಾಗಿ ಸುಬ್ರಮಣ್ಯ ಆಚಾರ್ ಗುಲ್ವಾಡಿ ಆಯ್ಕೆಯಾಗಿದ್ದಾರೆ ಯಕ್ಷಗಾನ, ನಾಟಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸುಬ್ರಹಣ್ಯ ಅವರು ಜ್ಯೂನಿಯರ್ ಜೆಸಿ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿದ್ದಾರೆ. ನಿರ್ಣಾಯಕ ಮಂಡಳಿ ಸಭೆಯಲ್ಲಿ ಜೆ.ಸಿ.ಐ ೨೦೧೭ರ ಚುನಾಯಿತ ಅದ್ಯಕ್ಷರಾಗಿರುವ ಅಕ್ಷತಾ ಗಿರೀಶ್, ನಿಕಟಪೂರ್ವ ಅದ್ಯಕ್ಷ ವಿಷ್ಣು.ಕೆ.ಬಿ. ಹಾಗೂ ಕಾರ್ಯದರ್ಶಿ ರಾಘು ವಿಠಲವಾಡಿ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು.

Exit mobile version