Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಶಿರಡಿ ಶ್ರೀ ಸಾಯಿಬಾಬಾ ಮೂರ್ತಿ ಅನಾವರಣ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗಂಗೊಳ್ಳಿಯ ಮೇಲ್‌ಗಂಗೊಳ್ಳಿ ಶ್ರೀ ಬಸವೇಶ್ವರ ದೇವಸ್ಥಾನದ ಬಳಿ ನೂತನವಾಗಿ ನಿರ್ಮಿಸಲಾಗಿರುವ ಸುಮಾರು ೭ ಅಡಿ ಎತ್ತರದ ಕುಳಿತ ಭಂಗಿಯ ಶಿರಡಿ ಶ್ರೀ ಸಾಯಿಬಾಬಾ ಮೂರ್ತಿ ಅನಾವರಣ ಮತ್ತು ಶ್ರೀ ಸಾಯಿಬಾಬಾ ಮಂದಿರದ ಉದ್ಘಾಟನಾ ಕಾರ್ಯಕ್ರಮ ಶನಿವಾರ ಜರಗಿತು.

ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಪೂಜಾರಿ ಅವರು ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿ, ಸಾಯಿಬಾಬಾ ಪವಾಡಗಳನ್ನು ವರ್ಣಿಸಲು ಸಾಧ್ಯವಿಲ್ಲ. ಯಾವುದೇ ಜಾತಿ ಮತ ಬೇಧವಿಲ್ಲದೆ ಎಲ್ಲರನ್ನೂ ಒಂದಾಗಿ ಕಾಣುವ ಮೂಲಕ ಅವರ ಅನೇಕ ಸಂಕಷ್ಟಗಳನ್ನು ಪರಿಹರಿಸಿದ ಪವಾಡ ಪುರುಷರು ಶ್ರೀ ಸಾಯಿಬಾಬಾ. ಭಕ್ತರ ಅಪೇಕ್ಷೆಯಂತೆ ಸಾಯಿ ಬಾಬಾರ ವಿಗ್ರಹವನ್ನು ಇಂತಹ ಪುಣ್ಯಸ್ಥಳದಲ್ಲಿ ಪ್ರತಿಷ್ಠಾಪಿಸಿರುವುದು ಈ ಪರಿಸರದ ಜನರ ಸೌಭಾಗ್ಯ ಎಂದರು.

ಶ್ರೀ ಸಾಯಿಬಾಬಾ ಮಂದಿರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಅರ್ಧಕ್ಕೆ ನಿಂತು ಆರ್ಥಿಕ ಮುಗ್ಗುಟ್ಟು ಎದುರಾದಾಗ ನಡೆದ ಪವಾಡದಿಂದ ಪ್ರೇರಣೆ ಪಡೆದ ಈ ಭಾಗದ ಜನರು ಸಾಯಿಬಾಬಾ ಮಂದಿರವನ್ನು ನಿರ್ಮಿಸಿ ಸಾಯಿ ಬಾಬಾ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು ಶ್ಲಾಘನೀಯ ಎಂದರು.

ಪತ್ರಕರ್ತ ಬಿ.ರಾಘವೇಂದ್ರ ಪೈ, ಓಂ ಶ್ರೀ ಮಾತೃ ಮಂಡಳಿಯ ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷ ಪ್ರೇಮಾ, ಶ್ರೀಧರ ಜಿ.ಎಂ., ಈಶ್ವರ ಜಿ., ಶಾಂತಲಾ, ಸರಸ್ವತಿ, ಅರ್ಚಕರಾದ ಮಣಿಕಂಠ ದಾಸ ಮೊದಲಾದವರು ಉಪಸ್ಥಿತರಿದ್ದರು.

Exit mobile version