Site icon Kundapra.com ಕುಂದಾಪ್ರ ಡಾಟ್ ಕಾಂ

ಪೆಟ್ರೋಲ್ ಲೀಟರ್‌ಗೆ 80 ಪೈಸೆ, ಡೀಸೆಲ್ ರೂ.1.30 ಅಗ್ಗ

ಹೊಸದಿಲ್ಲಿ : ಪೆಟ್ರೋಲ್ ಲೀಟರ್‌ಗೆ 80 ಪೈಸೆ ಮತ್ತು ಡೀಸೆಲ್ ರೂ.1.30 ಇಳಿಕೆಯಾಗಿದ್ದು, ಪರಿಷ್ಕೃತ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ.

ಹೊಸ ದರಗಳನ್ವಯ ರಾಜಧಾನಿ ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ದರ ರೂ.59.20, ಡೀಸೆಲ್ ದರ ರೂ.47.20ಕ್ಕೆ ನಿಗದಿಯಾಗಿದೆ ಎಂದು ದೇಶದ ಬೃಹತ್ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೇಳಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕುಸಿದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ತಿಂಗಳಲ್ಲಿ ಎರಡನೇ ಸಲ ಇಳಿಕೆಯಾದಂತೆ ಆಗಿದೆ. ಏಪ್ರಿಲ್ 2ರಂದು ಪೆಟ್ರೋಲ್ 49 ಪೈಸೆ, ಡೀಸೆಲ್ ರೂ.1.21ರಷ್ಟು ಇಳಿಕೆಯಾಗಿತ್ತು.

Exit mobile version