Kundapra.com ಕುಂದಾಪ್ರ ಡಾಟ್ ಕಾಂ

ಆಕಾಶವಾಣಿಯಲ್ಲಿ ಉಪಭಾಷೆಗಳ ಬಳಕೆಗೆ ಪ್ರಾಶಸ್ತ್ಯ

ಹೊಸದಿಲ್ಲಿ: ಬಡುಕಟ್ಟು ಜನರಿಗೆ ಸರಕಾರದ ಯೋಜನೆಗಳು ಪರಿಣಾಮಕಾರಿಯಾಗಿ ತಲುಪಲು ಬುಡಕಟ್ಟು ಸಚಿವಾಲಯ ಆಕಾಶವಾಣಿಯ ಮೊರೆ ಹೋಗಿದೆ. ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗುವ ಸರಕಾರಿ ಯೋಜನೆಗಳಲ್ಲಿ ಹೆಚ್ಚೆಚ್ಚು ಬುಡಕಟ್ಟು ಜನರು ಬಳಸುವ ಉಪಭಾಷೆಗಳನ್ನು ಬಳಸುವಂತೆ ಬುಡಕಟ್ಟು ಸಚಿವಾಲಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಕೋರಿಕೊಂಡಿದೆ.

ಬಡುಕಟ್ಟು ಜನರು ತಮ್ಮ ನುಡಿ ಬಿಟ್ಟು ಬೇರೆ ಯಾವುದನ್ನೂ ಅರ್ಥೈಸಿಕೊಳ್ಳುವುದಿಲ್ಲ. ಇದರಿಂದಾಗಿ ಸಚಿವಾಲಯದ ಯೋಜನೆಗಳು ಕೆಲವರಿಗಷ್ಟೇ ಸೀಮಿತವಾಗುತ್ತಿದೆ. ಈ ಕೊರತೆ ಸರಿಪಡಿಸುವ ಉದ್ದೇಶದಿಂದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಜತೆ ಸಮಾಲೋಚಿಸಿ ವಿಸ್ತೃತವಾದ ಯೋಜನೆ ರೂಪಿಸುವುದಾಗಿ ಅದು ಹೇಳಿದೆ.

Exit mobile version