Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ರಾಷ್ಟ್ರೀಯ ಮತದಾನ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಾನವಹಕ್ಕುಗಳ ಕೋಶದ ಆಶ್ರಯದಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆ ನಡೆಯಿತು.

ಕಾರ್ಯಕ್ರಮದ ಮುಖ್ಹ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ವರದರಾಜ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ನಿತ್ಯಾನಂದ ಎನ್. ಮಾತನಾಡಿ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದಲ್ಲಿ ಮತದಾನವು ಪ್ರಜೆಗಳಿಗೆ ಇರುವಂಅತಹ ಅತಿ ಮುಖ್ಯವಾದ ಹಕ್ಕಾಗಿದೆ. ಇದರ ಕುರಿತು ವಿಶೇಷವಾಗಿ ಯುವಜನರಲ್ಲಿ ಜಾಗೃತಿ ಮೂಡಬೇಕಾಗಿದೆ. ಮತದಾನದ ಅತಿಮುಖ್ಯವಾದ ಪ್ರಕ್ರಿಯೆಯಲ್ಲಿ ಬರುವ ಚುನಾವಣೆಯ ಮಹತ್ವವನ್ನು ಕುರಿತು ಅರಿಯಬೇಕಾಗಿದೆ. ಆಧುನಿಕ ತಂತ್ರಜ್ನಾನದ ಕುರಿತು ತಿಳುವಳಿಕೆಯನ್ನು ಪಡೆಯಬೇಕು ಎಂದು ಹೇಳಿದರು.

ಅವರು ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಪ್ರಸ್ತುತ ಬಳಕೆಯಾಘುತ್ತರುವ ವಿದ್ಯನ್ಮಾನ ಮತದಾನ ಯಂತ್ರದ ವಿಡಿಯೊವನ್ನು ತೋರಿಸಿ ಅದರ ಕಾರ್ಯವೈಖರಿಯ ಕುರಿತು ಪ್ರಾಯೋಗಿಕವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.  ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಜಿ.ಎಂ ಉದಯಕುಮಾರ್ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶುಭಕರ ಆಚಾರಿ ಸ್ವಾಗತಿಸಿದರು. ಪ್ರೊ.ಸುರೇದ್ರನಾಥ ಶೆಟ್ಟಿ ಕಾರ್ಯಕ್ರಮನಿರ್ವಹಿಸಿದರು. ಹರ್ಷಿತಾ ವಂದಿಸಿದರು.

Exit mobile version