Kundapra.com ಕುಂದಾಪ್ರ ಡಾಟ್ ಕಾಂ

ಕಟ್ಕೆರೆ ಗೆಂಡ ಸೇವೆ, ಹಾಲುಹಬ್ಬ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತಿಹಾಸ ಪ್ರಸಿದ್ದ ಕುಂದಾಪುರ ಸಮೀಪದ ಕಟ್ಕೆರೆ ಶ್ರೀ ಮಹಾದೇವಿ ಕಾಳಿಕಾಂಬಾ ಮತ್ತು ಸಪರಿವಾರ ದೈವಸ್ಥಾನದ ವಾರ್ಷಿಕ ಜಾತ್ರೆ ಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಲುಹಬ್ಬದಲ್ಲಿ ಪಾಲ್ಗೊಂಡು ಹಣ್ಣುಕಾಯಿ ಸೇವೆ, ಹೂವು, ಕಾಲಚಕ್ರ ಕಾಣಿಕೆ ಒಪ್ಪಿಸಿದರು. ಆ.೨೬ರಂದು ರಾತ್ರಿ ಗೆಂಡ ಸೇವೆ ಸಾಂಗವಾಗಿ ನಡೆಯಿತು. ಜ.೨೭ರಂದು ಡಕ್ಕೆಬಲಿ, ತುಲಾಭಾರ ಸೇವೆ, ದೈವ ದರ್ಶನ ಜರುಗಿತು. ಕಟ್ಕೆರೆ ಪರಿಸರದ ಗ್ರಾಮಸ್ಥರು ಹಾಗೂ ದೂರದ ಊರುಗಳಲ್ಲಿ ನೆಲೆಸಿರುವ ಭಕ್ತರು ಶ್ರೀದೇವಿಗೆ ವಿಶೇಷ ಪೂಜೆ, ವಾರ್ಷಿಕ ಸೇವೆ, ಹರಕೆ ಸಲ್ಲಿಸಿದರು. ಜಾತ್ರೆಯ ಅಂಗವಾಗಿ ಜ. ೨೬ರಂದು ರಾತ್ರಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕರುನಾಡ ಗೆಳೆಯರು – ಕೋಟೇಶ್ವರ ಇವರಿಂದ ಸಾಮಾಜಿಕ ನಗೆ ನಾಟಕ : ಎಂತ ಇತ್ತ್ ಕಾಣ್ಕ ಮತ್ತು ಜ. ೨೭ರಂದು ರಾತ್ರಿ ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳದವರಿಂದ ಯಕ್ಷಗಾನ ಬಯಲಾಟ ಸೇವೆ ನಡೆಯಿತು. ಜಾತ್ರೆಯಲ್ಲಿ ನೂಕುನುಗ್ಗಲು ಆಗದಂತೆ ಆಡಳಿತ ಮಂಡಳಿ ಭಕ್ತರ ಅನುಕೂಲತೆಗಾಗಿ ವಿಶೇಷ ವ್ಯವಸ್ಥೆ ರೂಪಿಸಿತ್ತು. ಆಡಳಿತ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು, ಸ್ವಯಂ ಸೇವಕರು ಸಹಕರಿಸಿದರು.

Exit mobile version