Kundapra.com ಕುಂದಾಪ್ರ ಡಾಟ್ ಕಾಂ

ಲಿವ್‌ಇನ್‌ ಸಂಬಂಧಕ್ಕೆ ಕಾನೂನಿನಲ್ಲಿ ವಿವಾಹದ ಮಾನ್ಯತೆ

ಹೊಸದಿಲ್ಲಿ: ಮದುವೆಯಾಗದೆ ಒಟ್ಟಿಗೆ ಬಾಳುವ ಅವಿವಾಹಿತರನ್ನು (ಲಿವ್‌ಇನ್‌ ಟುಗೇದರ್) ಕಾನೂನು ಪ್ರಕಾರ ವಿವಾಹಿತರೆಂದು ಪರಿಗಣಿಸಬೇಕು ಮತ್ತು ಸಂಗಾತಿಯ ನಿಧನ ನಂತರ ಮಹಿಳೆಗೆ ಪತಿಯ ಆಸ್ತಿಯ ಹಕ್ಕು ದೊರೆಯುಲಿದೆ ಎಂದು ಪ್ರಕರಣವೊಂದರ ಇತ್ಯರ್ಥ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಆದೇಶಿಸಿದೆ.

ದೀರ್ಘಕಾಲದ ಸಹಜೀವನವನ್ನು ಕಾನೂನು ಸಮ್ಮತ ವಿವಾಹವೆಂದು ಪರಿಗಣಿಸಬಹುದಾಗಿದ್ದು, ಆ ಮದುವೆಯನ್ನು ಅಕ್ರಮ ಎಂದು ಪ್ರತಿವಾದಿಗಳು ಸಾಬೀತುಪಡಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಂ.ಕ್ಯೂ ಇಕ್ಬಾಲ್‌ ಹಾಗೂ ಅಮಿತ್ವಾ ರಾಯ್‌ ಅವರನ್ನೊಳಗೊಂಡ ಪೀಠ ಹೇಳಿದೆ.

‘ಪತಿ ಪತ್ನಿಯಂತೆ ಪುರುಷ ಹಾಗೂ ಮಹಿಳೆ ಸಹ ಜೀವನ ನಡೆಸಿದ್ದು ಸಾಬೀತಾದರೆ, ಕಾನೂನಿನ ಪ್ರಕಾರ ಅವರನ್ನು ವಿವಾಹಿತರು ಎಂದು ಪರಿಗಣಿಸಲಾಗುವುದು. ಪತಿ-ಪತ್ನಿಯಂತೆ ಬಹುಕಾಲ ಒಟ್ಟಿಗೆ ಬಾಳಿದವರನ್ನು ವಿವಾಹಿತರೆಂದು ಪರಿಗಣಿಸುವ ಜತೆಗೆ ಮಹಿಳೆಗೆ ಪತಿಯ ಆಸ್ತಿ ಮೇಲೆ ಹಕ್ಕು ಇದೆ ಎಂದು ಪ್ರತಿಪಾದಿಸಿದೆ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟ ಪಡಿಸಿದೆ.

ಈ ನಡುವೆ ಲಿವ್ ಇನ್ ಟುಗೆದರ್ ಸಂಬಂಧ ಸತಿ ಪತಿಗಳನ್ನು ಸಂಬಂಧವನ್ನು ಮೀರಿದ್ದಾಗಿದ್ದು, ಅವರನ್ನು ವಿವಾಹಿತರನ್ನಾಗಿ ಪರಿಗಣಿಸುವುದು ಎಷ್ಟು ಸೂಕ್ತ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Exit mobile version