Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯಪಾಲರುಗಳ ಹೊರರಾಜ್ಯ ತಿರುಗಾಟಕ್ಕೆ ಬೇಕ್

ಹೊಸದಿಲ್ಲಿ: ನಿರ್ದಿಷ್ಟು ರಾಜ್ಯಕ್ಕೆ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ರಾಜ್ಯಪಾಲರು ಆ ರಾಜ್ಯಗಳಿಗಿಂತ ಹೊರಗೆ ಹೆಚ್ಚಿನ ಕಾಲ ಕಳೆಯುತ್ತಿರುವುದು ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಾಜ್ಯಪಾಲರಿಗೆ ಅಂಕುಶ ಹಾಕಲು ಮುಂದಾಗಿದೆ.

ರಾಜ್ಯಪಾಲರು ವರ್ಷದ 292 ದಿನ ಆಯಾ ರಾಜ್ಯಗಳಲ್ಲಿ ಇರಬೇಕು ಮತ್ತು ರಾಷ್ಟ್ರಪತಿಯವರ ಅನುಮತಿ ಪಡೆಯದೆ ರಾಜ್ಯ ತೊರೆಯುವಂತಿಲ್ಲ ಎಂದು ಕೇಂದ್ರ ನಿರ್ಬಂಧ ವಿಧಿಸಿದೆ. ಆದಾಗ್ಯೂ ಕೊನೆ ಕ್ಷಣದಲ್ಲಿ ಪ್ರಯಾಣ ಮಾಡಬೇಕಾಗಿ ಬಂದಲ್ಲಿ ಸೂಕ್ತ ಕಾರಣವನ್ನು ವಿವರಿಸಬೇಕಿದೆ.

ಅತಿ ತುರ್ತು ಕಾರಣದ ಹೊರತಾಗಿ ರಾಷ್ಟ್ರಪತಿ ಸಮ್ಮತಿಸದೆ ರಾಜ್ಯಪಾಲರು ರಾಜ್ಯಗಳ ಹೊರಗೆ ಇರುವಂತಿಲ್ಲ ಎಂದು ಗೃಹ ಸಚಿವಾಲಯ ಆದೇಶ ಹೊರಡಿಸಿದ್ದು, ಇದು 18ಹೊಸ ಅಂಶಗಳನ್ನು ಒಳಗೊಂಡ ನಿಯಮಾವಳಿಯನ್ನೂ ಒಳಗೊಂಡಿದೆ.

Exit mobile version