Kundapra.com ಕುಂದಾಪ್ರ ಡಾಟ್ ಕಾಂ

ಬೋಸ್ ಕುಟುಂಬದ 20ವರ್ಷ ವಿರುದ್ಧ ಬೇಹುಗಾರಿಕೆ

ಹೊಸದಿಲ್ಲಿ: ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಸುಭಾಷ್‌ಚಂದ್ರ ಬೋಸ್ ಅವರ ಕುಟುಂಬ ಹಾಗೂ ಸಂಬಂಧಿಗಳ ಮೇಲೆ ಸತತ 20 ವರ್ಷಗಳ ಕಾಲ ಕಾಲ ಜವಾಹರಲಾಲ್ ನೆಹರು ಸರಕಾರ ಗೂಢಚಾರಿಕೆ ನಡೆಸಿದ್ದ ಗಢಚಾರ ಇಲಾಖೆ ಕಡತಗಳಲ್ಲಿನ ಮಾಹಿತಿ ಸೊರಿಕೆಯಾಗಿದೆ.

ಸುಭಾಷ್ ಕುಟುಂಬದವರು ವಾಸಿಸುತ್ತಿದ್ದ ಕೋಲ್ಕೊತಾದಲ್ಲಿನ ಎರಡು ಮನೆಗಳ ಮೇಲೆ ಗುಪ್ತಚರ ಇಲಾಖೆ ಹಿಂಬಾಲಿಸುತ್ತಿತ್ತು. ಸುಭಾಷ್ ಅವರ ಅಣ್ಣ ಶರತ್ ಚಂದ್ರ ಬೋಸ್ ಮತ್ತು ಅವರ ಮಕ್ಕಳ ಮೇಲೆ ಗುಪ್ತಚರ ಇಲಾಖೆ ಸತತವಾಗಿ ಗೂಢಚಾರಿಕೆ ನಡೆಸಿತ್ತು. ಬೋಸ್ ಪತ್ನಿ ಎಮಿಲಿ ಬೋಸ್ ಅವರು ಅಣ್ಣನ ಮಕ್ಕಳಿಗೆ ಬರೆಯುತ್ತಿದ್ದ ಪತ್ರಗಳನ್ನು ರಹಸ್ಯವಾಗಿ ಓದಲಾಗುತ್ತಿತ್ತು. ಸುಭಾಷ್ ಕುಟುಂಬ ಸದಸ್ಯರ ಮನೆಗೆ ಯಾರು ಬರುತ್ತಾರೆ, ಯಾರನ್ನು ಭೇಟಿಯಾಗುತ್ತಾರೆ ಎನ್ನುವ ಸಂಗತಿಗಳನ್ನು ಅಧಿಕಾರಿಗಳು ಗಮನಿಸುತ್ತಿದ್ದರು ಎಂದು ಕಡತಗಳಲ್ಲಿ ಹೇಳಲಾಗಿದೆ.

ಪಶ್ಚಿಮ ಬಂಗಾಳದಲ್ಲಿರುವ ಗುಪ್ತಚರ ಇಲಾಖೆಯ ಶಾಖೆಯವರು ಕೇಂದ್ರ ಕಚೇರಿಗೆ ಕಳುಹಿಸಿದ ಎರಡು ಕಡತಗಳು ಬಹಿರಂಗಗೊಂಡಿದ್ದು, ಬೋಸ್ ಕುಟುಂಬ ಹಾಗೂ ಸಂಬಂಧಿಗಳ ಮೇಲೆ 1948ರಿಂದ 1968ರವರೆಗೆ ಸತತ 20 ವರ್ಷಗಳ ಕಾಲ ತೀವ್ರ ನಿಗಾ ಇಡಲಾಗಿತ್ತು. ನೆಹರು ಸರಕಾರ ಈ ಕಣ್ಗಾವಲು ನಡೆಸಿತ್ತು ಎಂದು 2012ರಲ್ಲಿ ರಾಷ್ಟ್ರೀಯ ಪತ್ರಾಗಾರ ಸೇರಿದ್ದ ಕಡತಗಳಲ್ಲಿರುವ ಮಾಹಿತಿಯಿಂದ ತಿಳಿದು ಬಂದಿದೆ.

ಬೋಸ್ ನಿಗೂಢ ಸಾವಿನ ಕುರಿತಾಗಿ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕೈಗೊಂಡಿದ್ದ ನಿಲುವನ್ನೇ ಮೋದಿ ನೇತೃತ್ವದ ಎನ್‌ಡಿಎ ಸರಕಾರವೂ ಮುಂದುವರಿಸಿದೆ. ಬೋಸ್ ಅಂತ್ಯ ಕುರಿತಾದ ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗದು ಎಂದು ಪ್ರಧಾನಿ ನರೆಂದ್ರ ಮೋದಿ ಕಚೇರಿ ಇತ್ತೀಚೆಗೆ ಸ್ಪಷ್ಟಪಡಿಸಿತ್ತು. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಸುಭಾಷ್ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂಬ ಸಾರ್ವಜನಿಕರ ಆಗ್ರಹವನ್ನು ಕೇಂದ್ರ ಸರಕಾರವು ತಿರಸ್ಕರಿಸುತ್ತಾ, ಗೌಪ್ಯತೆ ವಾದವನ್ನು ಮಂಡಿಸುತ್ತಾಲೇ ಬಂದಿದೆ.

Exit mobile version