Kundapra.com ಕುಂದಾಪ್ರ ಡಾಟ್ ಕಾಂ

ಪ್ರಯೋಗಶೀಲತೆ, ಕ್ರೀಯಾಶೀಲತೆಯಿಂದ ರಂಗಕಲೆಗಳು ಜೀವಂತ: ವಿನಾಯಕ ಎಸ್.ಎಂ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸದಾ ಪ್ರಯೋಗಶೀಲತೆ, ಕ್ರೀಯಾಶೀಲತೆ ಹಾಗೂ ಸೃಜನಶೀಲತೆಯ ಸಾಧ್ಯತೆಗಳನ್ನು ರಂಗಭೂಮಿಯಲ್ಲಿ ಅಳವಡಿಸಿಕೊಳ್ಳುವುದರಿಂದ ರಂಗಕಲೆಗಳು ಜೀವಂತವಾಗಿರುತ್ತದೆ ಎಂದು ಕುಂದಾಪುರ ರಂಗ ಅಧ್ಯಯನ ಕೇಂದ್ರದ ಶಿಕ್ಷಕ ವಿನಾಯಕ ಎಸ್.ಎಂ ಹೇಳಿದರು.

ಅವರು ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ೪೦ ಸಂಭ್ರಮದ ಅಂಗವಾಗಿ ಜರುಗುತ್ತಿರುವ ರಂಗ ಲಾವಣ್ಯ – ಕಲಾಮಹೋತ್ಸವ ಕಾರ್ಯಕ್ರಮದಲ್ಲಿ ಶುಭಶಂಸನೆಗೈದರು. ನಲವತ್ತು ವರ್ಷಗಳನ್ನು ಪೂರೈಸಿರುವ ಲಾವಣ್ಯ ಸಂಸ್ಥೆಯು ರಂಗಕಲೆಯೊಂದಿಗೆ ವೈಚಾರಿಕತೆಯನ್ನು ಜಾಗೃತಿಗೊಳಿಸುತ್ತಾ ಬಂದಿದೆ. ಇದು ಊರಿನ ಪ್ರತಿಯೋರ್ವರು ನಮ್ಮ ಸಂಸ್ಥೆಯು ಎನ್ನುವ ಮಟ್ಟಿಗೆ ಬೆಳೆದು ನಿಂತಿದೆ ಎಂದರು.

ಲಾವಣ್ಯದ ಕಲಾವಿದರಾದ ಉದಯ ಕಿಣಿ, ವಿನಾಯಕ ಪ್ರಭು, ಸತ್ಯಪ್ರಸನ್ನ, ನಾಗರಾಜ ತಗ್ಗರ್ಸೆ ಹಾಗೂ ನಾಗಪ್ಪ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಲಾವಣ್ಯದ ರಿ. ಬೈಂದೂರು ವ್ಯವಸ್ಥಾಪಕ ಗಣೇಶ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಜಯಾನಂದ ಹೋಬಳಿದಾರ್, ಶಿಕ್ಷಕ ಗುರುರಾಜ್ ರಾವ್, ಲಾವಣ್ಯದ ಗೌರವಾಧ್ಯಕ್ಷ ಶ್ರೀನಿವಾಸ ಪ್ರಭು, ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ, ಕಾರ್ಯದರ್ಶಿ ನಾರಾಯಣ ಕೆ., ಮೊದಲಾದವರು ಉಪಸ್ಥಿತರಿದ್ದರು.

ಲಾವಣ್ಯ ಬೈಂದೂರು ಅಧ್ಯಕ್ಷ ಗಿರೀಶ್ ಬೈಂದೂರು ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ ಕಾರಂತ್ ವಂದಿಸಿದರು. ಮಂಜುನಾಥ ಶಿರೂರು ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಗಣಪತಿ ಎಸ್. ಕಾರ್ಯಕ್ರಮ ನಿರೂಪಿಸಿದರು.

Exit mobile version