Kundapra.com ಕುಂದಾಪ್ರ ಡಾಟ್ ಕಾಂ

ಮೇ 1ರಿಂದ ಮೊಬೈಲ್ ರೋಮಿಂಗ್ ದರ ಅಗ್ಗ

ಹೊಸದಿಲ್ಲಿ: ದೇಶದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ರಾಷ್ಟ್ರೀಯ ರೋಮಿಂಗ್ ಸೇವಾ ಶುಲ್ಕವನ್ನು ಮೇ 1ರಿಂದ ಕಡಿತಗೊಳಿಸಲಿದೆ. ಅದೇ ದಿನದಿಂದ ಅನ್ವಯವಾಗುವಂತೆ ಗ್ರಾಹಕರಿಗೆ ವಿಶೇಷ ರೋಮಿಂಗ್ ಶುಲ್ಕ ಯೋಜನೆಗಳನ್ನು ನೀಡುವಂತೆ ಮೊಬೈಲ್ ಸೇವಾ ಕಂಪನಿಗಳಿಗೆ ಟ್ರಾಯ್ ಸೂಚಿಸಿದೆ.

ಸದ್ಯದ ದರ
* ಹೊರ ಹೋಗುವ ವಾಯ್ಸ್‌ಕಾಲ್ ಮೇಲಿನ ರೋಮಿಂಗ್ ಶುಲ್ಕ ನಿಮಿಷಕ್ಕೆ 1 ರೂ.
*ಒಳ ಕರೆಗಳ ಶುಲ್ಕ ನಿಮಿಷಕ್ಕೆ 75 ಪೈಸೆ.

ಪರಿಷ್ಕೃತ ದರ
* ಹೊರಹೋಗುವ ಸ್ಥಳೀಯ ವಾಯ್ಸ್ ಕಾಲ್ ಮೇಲಿನ ರೋಮಿಂಗ್ ದರ ನಿಮಿಷಕ್ಕೆ 80 ಪೈಸೆ.
* ಒಳಬರುವ ಸ್ಥಳೀಯ ಕರೆಗಳ ಮೇಲಿನ ರೋಮಿಂಗ್ ದರ ನಿಮಿಷಕ್ಕೆ 45 ಪೈಸೆ.
* ಹೊರಹೋಗುವ ಸ್ಥಳೀಯ ಎಸ್‌ಎಂಎಸ್ ಮೇಲಿನ ರಾಷ್ಟ್ರೀಯ ರೋಮಿಂಗ್ ದರ 25 ಪೈಸೆ.

* ದೂರದ ಹೊರ ಕರೆಗಳ ರಾಷ್ಟ್ರೀಯ ರೋಮಿಂಗ್ ಶುಲ್ಕವನ್ನು 1.50 ರೂ.ಗಳಿಂದ 1.15 ರೂ.ಗಳಿಗೆ ಕಡಿತ.
* ಎಸ್‌ಎಂಎಸ್ ದರವನ್ನು ಪ್ರತಿ ಎಸ್‌ಎಂಎಸ್‌ಗೆ 1.50 ರೂ.ಗಳಿಂದ ಕೇವಲ 38 ಪೈಸೆಗಳಿಗೆ ಇಳಿಕೆ.

Exit mobile version