Kundapra.com ಕುಂದಾಪ್ರ ಡಾಟ್ ಕಾಂ

ಪುರಸಭೆ ಸಾಮಾನ್ಯ ಸಭೆಯಲ್ಲಿ ಯುಡಿಜಿ ಕಾಮಗಾರಿ ಚರ್ಚೆ. ಪ್ರಗತಿ ಮಾತ್ರ ಶೂನ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುರಸಭೆ ನಾಲ್ಕು ಲಕ್ಷ ಎಸ್ಸಿಎಸ್ಟಿ ಫಲಾನುಭವಿಗೆ ಪ್ರಯೋಜನೆಕ್ಕೆ ಬರಲಿ ಅಂತ ಹಣಕಟ್ಟಿದರೆ, ಜೀವವಿಮಾ ಕಂಪೆನಿ ಒಂದಿಬ್ಬರು ಫಲಾನುಭವಿಗೆ ಹಣ ನೀಡಿದೆ. ಯುಜಿಡಿ ಕಾಮಗಾರಿ ಚರ್ಚೆಗಷ್ಟೇ ಸೀಮಿತ, ಪ್ರಗತಿ ಶೂನ್ಯ. ಕೆಲಸ ಸರಿಯಾಗಿ ಮಾಡೋದಾದರೆ ಮಾಡಿ, ಆಗದಿದ್ದರೆ ನಮ್ಮ ವಾರ್ಡಿಗೆ ಬರಲೇ ಬೇಡಿ. ಹೆದ್ದಾರಿ ಕಾಮಗಾರಿ ಸಂಪೂರ್ಣವಾಗದೆ ಟೂಲ್ ಫ್ರೀ ವಸೂಲಿ ಬಗ್ಗೆ ಖಂಡನಾ ನಿರ್ಣಯ.

ಇದು ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಪುರಸಭೆ ಸಾಮನ್ಯ ಸಭೆಯ ಹೈಲೈಟ್. ಕುಂದಾಪುರ ಪುರಸಭೆ ಎಸ್ಸಿಎಸ್ಟಿ ಜನರ ಅನುಕೂಲ ಕಲ್ಪಿಸಲು ಹಿಂದಿನ ಆಡಳಿತ ಜೀವಿವಿಮಾ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ನಾಲ್ಕು ಲಕ್ಷ ರೂ. ಕಂತು ಪಾವತಿಸಿತ್ತು. ಕಂಪನಿ ಕೂಡಾ ಫಲಾನುಭವಿಗಳ ಆಯ್ಕೆ ಮಾಡಿ, ಕಾರ್ಡ್ ಕೂಡಾ ಸರಿಯಾಗಿ ವಿತರಿಸಿಲ್ಲ. ಅದರ ಪ್ರಯೋಜನ ಒಂದಿಬ್ಬರಿಗೆ ಸಿಕ್ಕಿದ್ದು ಬಿಟ್ಟರೆ ಮತ್ತಾರಿಗೂ ಸಿಗಲಿಲ್ಲ. ಇದು ಜೀವವಿಮಾ ಕಂಪನಿ ಅಧಿಕಾರಿಗಳ ಬೇಜವಾಬ್ದಾರಿಯಾಗಿದ್ದು, ಕಂಪನಿ ಅಧಿಕಾರಿಗಳ ವಿರುದ್ಧ ಪುರಸಭೆ ತನಿಖೆ ಕ್ರಮಕ್ಕೆ ಮುಂದಾಗಬೇಕು ಎಂದು ಸದಸ್ಯ ಮೋಹನದಾಸ್ ಶೆಣೈ ಒತ್ತಾಯಿಸಿದರು.

ಇದಕ್ಕೆ ಪೂರಕವಾಗಿ ಸದಸ್ಯ ಶ್ರೀಧರ ಶೇರೆಗಾರ್ ಮಾತನಾಡಿ, ಫಲಾನುಭವಿಗಳ ಲಿಸ್ಟ್ ಕಂಪನಿ ಬಳಿ ಇಟ್ಟುಕೊಂಡಿದ್ದು, ಇದರಿಂದ ವಿಮಾ ಪಾಲಸಿ ಮಾಡಿಸಿದವರಿಗೆ ಪ್ರಯೋಜನ ಸಿಗುತ್ತಿಲ್ಲ. ಕುಂದಾಪುರ ಪುರಸಭೆ ನಾಲ್ಕು ಲಕ್ಷದ ಇಡಿಗಂಟು ಕಟ್ಟಿದರೂ ಅಧಿಕಾರಿಗಳ ಬೇಜವಾಬ್ದಾರಿಗೆ ಫಲಾನುಭವಿ ಸಂಕಷ್ಟ ಪಡಬೇಕಾಗಿದ್ದು, ಎಲ್ಲಾ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗಬೇಕು ಎಂದು ಒತ್ತಾಯಿಸಿದರು.

ಇನ್ಶೂರೆನ್ಸ್ ಕಂಪನಿ ಫಲಾನುಭವಿಗಳಿಗೆ ಹಣ ನೀಡಿದ ಹಿನ್ನೆಲೆಯಲ್ಲಿ ಹಣ ತೆಡೆಹಿಡಿಯಲಾಗಿದ್ದು, ಅಧಿಕಾರಿಗಳು ಸರ್ವೆ ಮಾಡಿ ೮೦೦ ಜನರ ಪಟ್ಟಿ ಕೊಟ್ಟಿದ್ದಾರೆ. ಪುರಸಭೆ ೪ ಲಕ್ಷ ಅನುದಾನ ಪಾವತಿಸಿ, ಫಲಾನುಭವಿಗಳಿಗೆ ಕಾರ್ಡ್ ಅಂಚೆ ಮೂಲಕ ಕಳಿಸಿಕೊಡಲಾಗುತ್ತದೆ ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉತ್ತರಿಸಿದರು.

ಶೇ.೯೦ರಷ್ಟು ಕಾಮಗಾರಿ ಸಂಪೂರ್ಣವಾಗದೆ ಹೆದ್ದಾರಿ ಟೂಲ್ ಫೀ ವಸೂಲಿಗೆ ಹೆದ್ದಾರಿ ನಿರ್ಮಾಣ ಗುತ್ತಿಗೆದಾರರು ಮುಂದಾಗಿದ್ದಾರೆ. ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಪ್ಲೇ ಓವರ್ ಕಾಮಗಾರಿ ಕೂಡಾ ಮುಗಿದಿಲ್ಲ. ಕೆಲಸ ಸಂಪೂರ್ಣವಾಗದೆ ಸುಂಕ ವಸೂಲಿ ತರವಲ್ಲ ಎಂದು ಖಂಡಾನಾ ನಿರ್ಣಯಕ್ಕೆ ಸದಸ್ಯ ರವಿರಾಜ ಖಾರ್ವಿ ಒತ್ತಾಯಿಸಿದ್ದು, ಸುಂಕ ವಸೂಲಿ ಮಾಡದಂತೆ ಜಿಲ್ಲೆ ಉಸ್ತುವಾರಿ ಸಚಿವರು ಗಮನ ಹರಿಸಬೇಕು ಎಂಬ ಹೇಳಿಕೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಸಮರಕ್ಕೆ ನಾಂದಿ ಆಯಿತು.

ಶ್ರೀಧರ ಶೇರೆಗಾರ್, ಚಂದ್ರಶೇಖರ ಖಾರ್ವಿ, ಶಶಿಕಲಾ ಗಣೇಶ್ ಶೇರೆಗಾರ್ ಹಾಗೂ ಪ್ರಭಾಕರ ಕೋಡಿ ವಿರೋಧಿಸಿದರು. ಆಡಳಿತ ಪಕ್ಷದ ಸದಸ್ಯರಾದ ಸತೀಶ್ ಶೆಟ್ಟಿ, ನಾಗರಾಜ್ ಕಾಮದೇನು, ರಾಘವೇಂದ್ರ ದೇವಾಡಗ, ಸಿಸಿಲಿ ಕೋಟ್ಯಾನ್, ರವಿರಾಜ್ ಖಾರ್ವಿ ಹೇಳಿಕೆ ಸಮರ್ಥಿಸಿಕೊಂಡರು.

ಪುರಸಭೆ ಅಧ್ಯಕ್ಷ ರಾಜೇಶ್ ಕಾವೇರಿ ಮಾತನಾಡಿ, ಹೆದ್ದಾರಿ ಕಾಮಗಾರಿ ನಿರ್ಮಾಣ ಸಂಪೂರ್ಣವಾಗದೆ ಸುಂಕ ವಸೂಲಿ ಬೇಡಾ ಎಂದು ಖಂಡನಾ ನಿರ್ಣಯ ಮಂಡಿಸುವ ಸಲಹೆ ಎಲ್ಲಾ ಸದಸ್ಯರು ಒಮ್ಮತದ ಒಪ್ಪಗೆ ನೀಡಿದ್ದು, ಖಂಡನಾ ನಿರ್ಣಯ ಅನುಮೋಧಿಸಲಾಯುತು.

ಯುಜಿಡಿ ಕಾಮಗಾರಿ ಪ್ರಗತಿ ಬಗ್ಗೆ ಸಭೆಗೆ ಮಾಹಿತಿ ನೀಡಲು ಆಗಮಿಸಿದ್ದ ಇಂಜಿಯರ್ ಕುಂದಾಪುರದಲ್ಲಿ ೩೫ ಕಿಮೀ. ಪೈಪ್ ಲೈನಲ್ಲಿ ೧೮ ಕಿಮೀ. ಪೈಪ್ ಜೋಡಣೆಯಾಗಿದ್ದು, ೧೪೮೫ ಚೇಂಬರ್‌ಗಳಲ್ಲಿ ೫೩೦ ಛೇಂಬರ್ ಫಿಟ್ ಮಾಡಿಲಾಗಿದೆ ಎಂದು ವಿವರಿಸುವ ಸಮಯದಲ್ಲಿ ಸದಸ್ಯರು ಯುಜಿಡಿ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ಮುಗಿಬಿದ್ದರು.

ರಸ್ತೆಯಲ್ಲಿ ಜೋಡಿಸಿದ ಛೇಂಬರ್ ಕೆಲವು ಕಡೆ ರಸ್ತೆಗಿಂತ ಮೇಲಿದ್ದರೆ, ಮತ್ತೆ ಕೆಲವು ರಸ್ತೆ ಮಟ್ಟಕ್ಕಿಂತ ಕಳೆಗಿದೆ. ಛೇಂಬರ್ ಕೂಡಾ ಒಡೆಯುತ್ತಿದ್ದು, ಹಾಳಾದ ರಸ್ತೆ ಕೂಡಾ ದುರಸ್ತಿ ಮಾಡುತ್ತಿಲ್ಲ. ಯುಜಿಡಿ ಕಾಮಗಾರಿ ಸಭೆಯಲ್ಲಿ ಚರ್ಚೆಗಷ್ಟೇ ಸೀಮಿತವಾಗಿದ್ದು, ಪ್ರಗತಿ ಶೂನ್ಯ ಎಂದು ವಿಠಲ ಕುಂದಾರ್, ಸಂದೀಪ್ ಪೂಜಾರಿ ವಿಜಯ ಪೂಜಾರಿ ಆರೋಪಿಸಿ, ಸರಿಯಾಗಿ ಕೆಲಸ ಮಾಡೋದಾದರೆ ಮಾಡಿ ಇಲ್ಲದಿದ್ದರೆ ನಮ್ಮ ವಾರ್ಡಿಗೆ ಬರೋದೇ ಬೇಡಾ ಎಂದು ಎಚ್ಚರಿಸಿದರು. ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ ಯುಜಿಡಿ ಕಾಮಗಾರಿ ಬಗ್ಗೆ ಸದಸ್ಯರ ಆರೋಪ ಮಾಡಿದ್ದು, ಅದಕ್ಕೆ ಸಂಧಿಸುವಂತೆ ತಾಕೀತು ಮಾಡಿದರು.

ಸದಸ್ಯೆ ಪುಷ್ಪಾ ಶೇಟ್, ಮಾಜಿ ಅಧ್ಯಕ್ಷ ಕಲಾವತಿ ವಿವಿಧ ವಿಷಯಗಳ ಬಗ್ಗೆ ಸಭೆಯ ಗಮನ ಸೆಳೆದರು. ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

 

Exit mobile version