Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿಗೆ ಅಮ್ಮ: ಕುಂದಾಪುರದಲ್ಲಿ ಪೂರ್ವಭಾವಿ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ನೇತ್ರತ್ವದಲ್ಲಿ ಫೆ.೨೫ರಂದು ಉಡುಪಿಗೆ ಆಗಮಿಸಲಿರುವ ಸದ್ಗುರು ಮಾತಾ ಶ್ರೀ ಅಮೃತಾನಂದ ಮಯಿಯವರ ಕಾರ್ಯಕ್ರಮದ ಹಿನ್ನಲೆಯಲ್ಲಿ ಕುಂದಾಪುರದ ಹೋಟೆಲ್ ಹರಿಪ್ರಸಾದ್ ಸಭಾಂಗಣದಲ್ಲಿ ಕುಂದಾಪುರ ತಾಲೂಕು ಮಟ್ಟದ ಪೂರ್ವಭಾವಿ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಸುವ್ಯವಸ್ಥೆಯಿಂದ ನಡೆಯುವಂತಾಗಲು ತಯಾರಿಯ ದೃಷ್ಠಿಯಿಂದ ಕುಂದಾಪುರ ತಾಲೂಕು ಮಟ್ಟದಲ್ಲಿ ಶ್ರೀ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯನ್ನು ರಚಿಸಲಾಯಿತು. ಬಸ್ರೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ ಅವರು ಗೌರವಾಧ್ಯಕ್ಷರಾಗಿರುವ ಸಮಿತಿಯ ಅಧ್ಯಕ್ಷರಾಗಿ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯೆ ಶ್ರೀಮತಿ ಕಲ್ಪನಾ ಭಾಸ್ಕರ್ ಆಯ್ಕೆಯಾದರು. ಆರ್ಥಿಕ ಸಮಿತಿ ಸಂಚಾಲಕರಾಗಿ ಕೃಷ್ಣಪ್ರಸಾದ ಅಡ್ಯಂತಾಯ, ಪ್ರಚಾರ ಸಮಿತಿ ಸಂಚಾಲಕರಾಗಿ ಪುಂಡಲೀಕ ಬಂಗೇರ, ಬೀಜಾಡಿ, ಉಪಾಧ್ಯಕ್ಷರಾಗಿ ಹೆರಿಯಣ್ಣ ಬೀಜಾಡಿ, ಕೆ.ಕೆ. ಕಾಂಚನ್, ಕಿಶೋರ್ ಶೆಟ್ಟಿ ಮಂದಾರ್ತಿ, ಬಿ. ಚಂದ್ರಶೇಖರ, ಶ್ರೀಮತಿ ಆಶಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅನಿಲಕುಮಾರ್ ಶೆಟ್ಟಿ ಸಳ್ವಾಡಿ, ಜೊತೆ ಕಾರ್ಯದರ್ಶಿ ಸತೀಶ್ ಆಚಾರ‍್ಯ, ಬೇಳೂರು, ಕೋಶಾಧಿಕಾರಿಯಾಗಿ ಶಿವರಾಮ ಶೆಟ್ಟಿ ಹಂಗಳೂರು, ಜೊತೆ ಕೋಶಾಧಿಕಾರಿಯಾಗಿ ಗೌತಮ್ ಹೆಗ್ಡೆ ಕೋಟೇಶ್ವರ, ಆರ್ಥಿಕ ಸಮಿತಿ ಸಹ ಸಂಚಾಲಕರಾಗಿ ಮನೋಜ ಎಸ್. ಕರ್ಕೇರ ಬೇಳೂರು, ರಾಜೇಶ್ ಕಾವೇರಿ ಕುಂದಾಪುರ, ಶ್ರೀಮತಿ ಸರಸ್ವತಿ ಪುತ್ರನ್ ಕುಂಭಾಸಿ, ಪ್ರಕಾಶ್ ಮೆಂಡನ್, ಶಂಕರ ಪೂಜಾರಿ ಕೋಡಿ, ಸದಾನಂದ ಬಳ್ಕೂರು, ಪ್ರಚಾರ ಸಮಿತಿ ಸಹ ಸಂಚಾಲಕರಾಗಿ ಕಿಶೋರಕುಮಾರ ಕುಂದಾಪುರ, ರಾಜು ಪೂಜಾರಿ ಸಾಲಿಗ್ರಾಮ, ಸುಮತಿ ಮೊಗವೀರ, ಸಂತೋಷ ಕೋಣಿ, ಡಾ.ಸುಧಾಕರ ನಂಬಿಯಾರ್, ಚಂದ್ರಿಕಾ ಧನ್ಯ, ಕುಸುಮ ದೇವಾಡಿಗ, ವನಜಾಕ್ಷಿ ಆಚಾರ್, ಬಿ. ಟಿ. ಪ್ರಭಾಕರ ಆಯ್ಕೆಯಾದರು.

ಪೂರ್ವಭಾವಿ ಸಭೆಯಲ್ಲಿ ಉಡುಪಿ ಜಿಲ್ಲಾ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಪಾಂಡುರಂಗ ಮಲ್ಪೆ, ನವೀನ್ ಉಡುಪಿ, ಭವಾನಿ ಶಂಕರ, ಯೋಗೀಶ್ ಫೆ.೨೫ರಂದು ನಡೆಯಲಿರುವ ಕಾರ್ಯಕ್ರಮದ ಕುರಿತು ಮಾತನಾಡಿದರು.

Exit mobile version