Site icon Kundapra.com ಕುಂದಾಪ್ರ ಡಾಟ್ ಕಾಂ

ಮೊದಲ ಬಾಹ್ಯಾಕಾಶ ಸೆಲ್ಫಿ 5.7 ಲಕ್ಷ ರೂ.ಗೆ ಹರಾಜು

ಗಗನಯಾತ್ರಿಯೊಬ್ಬರು ಬಾಹ್ಯಾಕಾಶ ಕೇಂದ್ರದಲ್ಲಿ ಮೊದಲ ಬಾರಿಗೆ ತೆಗೆದ ಸೆಲ್ಫಿಯು ಆರು ಸಾವಿರ ಪೌಂಡ್‌ಗೆ (5.7 ಲಕ್ಷ ರೂ.) ಹರಾಜಾಗಿದೆ.

ನಾಸಾದ ಗಗನಯಾತ್ರಿ ಬುಝ್ ಅಲ್ಡ್ರಿನ್ ಅವರು 1996ರ ನವೆಂಬರ್‌ನಲ್ಲಿ ಜೆಮಿನಿ 12 ನೌಕೆಯಲ್ಲಿ ಶೂನ್ಯಾಕಾಶ ಯಾನಕ್ಕೆ ತೆರಳಿದ್ದಾಗ ಈ ಸೆಲ್ಫಿ ತೆಗೆದುಕೊಂಡಿದ್ದರು.

ಲಂಡನ್‌ನ ಬ್ಲೂಮ್ಸ್‌ಬರಿ ಹರಾಜಿನಲ್ಲಿ ನಾಸಾದ ಅಪರೂಪದ 700 ಸಂಗ್ರಹಚಿತ್ರಗಳು ಹರಾಜಾದವು. ಒಟ್ಟು 300 ಜನರು ಬಿಡ್ ಕರೆದು 4,89,440 ಪೌಂಡ್‌ಗಳಿಗೆ ಇವನ್ನು ಖರೀದಿಸಿದರು.

1946ರಲ್ಲಿ ಬಾಹ್ಯಾಕಾಶ ನೌಕೆಯಿಂದ ತೆಗೆದ ಭೂಮಿಯ ಮೊದಲ ಚಿತ್ರವು 1,736 ಪೌಂಡ್‌ಗಳಿಗೆ ಬಿಕರಿಯಾಯಿತು. 1969ರಲ್ಲಿ ಚಂದ್ರನ ಮೇಲೆ ನೀಲ್ ಆರ್ಮ್‌ಸ್ಟ್ರಾಂಗ್ ಅವರು ಹೆಜ್ಜೆ ಇಟ್ಟ ಮೊದಲ ಚಿತ್ರವು 3,472 ಪೌಂಡ್‌ಗಳಿಗೆ ಹರಾಜಾಯಿತು. ಚಂದ್ರನ ನೆಲದ ಮೇಲೆ ನಿಂತಾಗ ಭೂಮಿಯು

Exit mobile version