ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೇಸಿಐ ಕುಂದಾಪುರ ಪ್ರಾಯೋಜಿತ ಜೇಸಿಐ ಕುಂದಾಪುರ ಚರಿಷ್ಮಾ ಘಟಕದ ಪದಗ್ರಹಣ ಸಮಾರಂಭವು ಇತೀಚೆಗೆ ಸುಮೇದಾ ಹೋಟೆಲ್ ಸಹನಾ ಕನ್ವೆನ್ಷನ್ ಸೆಂಟರ್ ಕುಂದಾಪುರದಲ್ಲಿ ಜರುಗಿತು.
ನಾಯಕತ್ವ ನಿರ್ಮಾಣಕ್ಕೆ ವ್ಯಕ್ತಿತ್ವ ವಿಕಸನಕ್ಕೆ ಈ ಪ್ರಪಂಚಕ್ಕೆ ಇವರುವ ಅದ್ಬುತ ಸಂಸ್ಥೆ ಜೇಸಿ ಸಂಸ್ಥೆ. ಇದರಲ್ಲಿ ಮಹಿಳೆಯರಿಗೆ ನಾಯಕರಾಗಲ ಬೇಕಾದಷ್ಟು ಅವಕಾಶವಿದೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಾಯಕೀಯರಾಗಿ ಮಹಿಳೆಯರು ಮೂಡಿ ಬಂದಿದ್ದಾರೆ ಕಳೆದ ವರ್ಷದ ಪ್ರೇರಣೆಯಂತೆ ಈ ವರ್ಷದಲ್ಲಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಹಾಗೂ ವಲಯ ಆಡಳಿತ ಮಂಡಳಿ ಹಾಗೂ ಘಟಕದಲ್ಲಿ ಮಹಿಳಾ ಜೇಸಿಗಳೂ ಬಂದಿದ್ದಾರೆ ಎಂದು ಜೇಸಿಐ ಸೆನೆಟರ್ ಸದಾನಂದ ನಾವುಡ ಹೇಳಿದರು.
ಪೂರ್ವ ರಾಷ್ಠೀಯ ಉಪಾಧ್ಯಕ್ಷ ಜೇಸಿಐ ಇಂಡಿಯಾ ಮಾನಾಡಿದರು. ಜೇಸಿಐ ಕುಂದಾಪುರದ ಅಧ್ಯಕ್ಷೆ ಜೆ.ಎಫ್.ಪಿ ಅಕ್ಷತಾ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷೆ ಗೀತಾಂಜಲಿ ಆರ್ ನಾಯಕ್ ಯವರಿಗೆ ಅಧಿಕಾರ ಹಸ್ತಾಂತರಿಸಲಾಯಿತು ಜೆ.ಎಫ್.ಪಿ ಸಂತೋಷ್ ಜಿ, ವಲಯ ಅಧ್ಯಕ್ಷರು ಜೆ.ಎಫ್.ಎಮ್ ಮರಿಯಪ್ಪ, ವಲಯ ಉಪಾಧ್ಯಕ್ಷರು ಜೆ.ಎಪ್.ಎಮ್ ನಿತೀನ್ ಅವಬೃತ, ವಲಯ ನಿರ್ದೆಶಕರು ಅಬಿವೃದ್ದಿ ಮತ್ತು ಬೆಳವಣಿಗೆ ನಿಕಟ ಪೂರ್ವ ಅಧ್ಯಕ್ಷ ಜೆ.ಎಫ್.ಪಿ ವಿಷ್ಣು ಕೆ. ಬಿ, ಕಾರ್ಯಕ್ರಮದ ಯೋಜನಾಧಿಕಾರಿ ಜೇಸಿ ಚಂದನ ವೇದಿಕೆಯಲಿ ಉಪಸ್ಥಿತರಿದ್ದರು ಸಮಾರಂಭದಲ್ಲಿ ಭಾರತೀಯ ಜೇಸಿಸ್‌ನ ಪೂರ್ವ ಪ್ರದಾನ ಕಾನೂನು ಸಲಹೆಗಾರ ಪಿ.ಪಿ.ಪಿ ಶ್ರೀಧರ್ ಪಿ.ಎಸ್, ಜೇಸಿಐ ಕುಂದಾಪುರ ಸ್ಥಾಪಕ ಅಧ್ಯಕ್ಷರಾದ ಜೇಸಿ ಐರೋಡಿ ಶಂಕರನಾರಾಯಣ ಹೆಬ್ಬಾರ್, ಜೇಸಿರೆಟ್ ಸ್ಥಾಪಕಾಧ್ಯಕ್ಷೆ ಜೇಸಿ ಸುದಾ ಹೆಬ್ಬಾರ್ ಪೂರ್ವಧ್ಯಕ್ಷ ಜೇಸಿ ದಿನೇಶ್ ಗೋಡೆ ಜೇಸಿ ಚಂದ್ರ ಇಂಬಾಳಿ, ಜೇಸಿರೆಟ್ ಪೂರ್ವಧ್ಯಕ್ಷೆ ಜೇಸಿ ಮಾಲತಿ ವಿಷ್ಣು . ನಾಗರತ್ನ ಚಂದ್ರಶೇಖರ್ ಜೇಸಿ ನರೇಶ ಕೋಟೆಶ್ವರ ಜೇಸಿ ಚೇತನ್, ಭಾಗವಹಿಸಿದ್ದರು. ನೂತನ ಕಾರ್ಯದರ್ಶಿ ಜಯಲಕ್ಷ್ಮಿ ಅರುಣಕುಮಾರ ವಂದಿಸಿದರು.