ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆಮ್ಮಾಡಿಯಲ್ಲಿ ನಡೆದ ಅಪಘಾತದಲ್ಲಿ ಅಕಾಲಿಕ ಮರಣವನ್ನಪ್ಪಿದ ಚಿತ್ರಕಲಾ ಶಿಕ್ಷಕ ಭೋಜು ಹಾಂಡ ಅವರ ಸ್ಮರಣೆಯಲ್ಲಿ ಕೋಟೇಶ್ವರ ಪವವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಭೋಜು ಹಾಂಡರ ವಿದ್ಯಾರ್ಥಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಮೇಣದ ಬತ್ತಿಗಳನ್ನು ಬೆಳಗಿ, ಪೋಟೋಗೆ ಪುಪ್ಪನಮನ ಸಲ್ಲಿಸಿದರು.
ಜಿ.ಪಂ ಸದಸ್ಯೆ ಶ್ರೀಲತಾ ಶೆಟ್ಟಿ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ಜಾನಕಿ ಬಿಲ್ಲವ, ಭೋಜು ಹಾಂಡರ ಆಪ್ತಿ ಶಂಕರ ಮಡಿವಾಳ, ಸಂಘ ಸಂಸ್ಥೆಗಳ ಪ್ರಮುಖರಾದ ಡಾ. ಭಾಸ್ಕರ್ ಶೆಟ್ಟಿ, ಶೇಖರ ಕಲ್ಮಾಡಿ, ಗಣೇಶ್ ಕೊರಗ, ಸುಬ್ರಹ್ಮಣ್ಯ ಶೆಟ್ಟಿ, ಪ್ರವೀಣ್ ಹೆಗ್ಡೆ ಮೊದಲಾದವರು ಮಾತನಾಡಿದರು. ಕೋಟೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣಾನಂದ ಕೆ., ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭೋಜಹಾಂಡರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಶ್ರುತರ್ಪಣ ಮಿಡಿದರು. ಶಿಕ್ಷಕ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಬಳ್ಕೂರು, ಪ್ರವೀಣ್ ಹಾಗೂ ಸುಧೀರ್ ಸಹಕರಿಸಿದರು.