Kundapra.com ಕುಂದಾಪ್ರ ಡಾಟ್ ಕಾಂ

ಟೋಲ್ ವಿವಾದ: ಜಿಲ್ಲಾ ಬಂದ್‌ಗೆ ಕುಂದಾಪುರ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟೋಲ್ ಹಣ ಸಂಗ್ರಹ ವಿರುದ್ಧ  ವಿವಿಧ ಸಂಘಟನೆ ಹಾಗೂ ಪಕ್ಷಾತೀತ ಉಡುಪಿ ಜಿಲ್ಲೆ ಬಂದ್ ಕರೆಗೆ ಕುಂದಾಪುರದಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆಯಿತು.  ಸಾಸ್ತಾನದ ಟೋಲ್ ಬಳಿ, ಕೋಟ ತೆಕ್ಕಟ್ಟೆ ಕುಂದಾಪುರದಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತರೇ ಗ್ರಾಮೀಣ ಪ್ರದೇಶದಲ್ಲಿ ಎಂದಿನಂತೆ ಜನಸಂಚಾರವಿತ್ತು.

ಖಾಸಗಿ ಬಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದರೇ, ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿದ್ದವು. ಶೇ.೫ರಷ್ಟು ಮುಚ್ಚಿದ ಅಂಗಡಿ-ಮುಂಗಟ್ಟು. ಶಾಲಾ ಕಾಲೇಜ್ ರಜೆ ಘೋಷಣೆ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಆಟೋ ಸೇವೆಗೆ ಯಾವುದೇ ಅಡಚಣೆ ಆಗಿಲಿಲ್ಲ.

ಕುಂದಾಪುರ ನಗರದಲ್ಲಿ ಖಾಸಗಿ ಬಸ್ ಸಂಚಾರ ಇಲ್ಲದ ಕಾರಣ ಗ್ರಾಮೀಣ ಪ್ರದೇಶ ಜನಸಂಚಾರ ಕಡಿಮೆಯಿತ್ತು. ಕುಂದಾಪುರದ ಬ್ಯಾಂಕ್ ಹಾಗೂ ಕಚೇರಿಗಳ ಜನಸಂಖ್ಯೆ ಕಡಿಮೆಯಿದ್ದರೇ; ಕೆಲವು ಹೋಟೆಲ್, ಅಂಗಡಿ ಬಂದ್ ಆಗಿದ್ದವು. ಮತ್ತೆಲ್ಲಾ ಮಾಮೂಲಿನಂತ ಕಾರ‍್ಯ ನಿರ್ವಹಿಸಿತು.

ಬಸ್ ಸಂಚಾರವಿಲ್ಲದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಬರಲಾಗಲಿಲ್ಲ. ಹಾಜರಾತಿ ಕಮ್ಮಿ ಇದ್ದರಿಂದ ರಜೆ ಘೋಷಣೆ ಮಾಡಲಾಯಿತು. ಬೇರೆ ಬೇರೆ ಕಡೆಯಿಂದ ಬಂದ ಪ್ರಯಾಣಿಕರು ಊರು ಸೇರಲು ಪರದಾಡಿದರೆ, ಮತ್ತೆ ಕೆಲವರು ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರು. ನಿಷೇಧಾಜ್ಞೆ ಜಾರಿಯಿದ್ದರಿಂದ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಹಿತಕರ ಘಟನೆ ನಡೆಯಲಿಲ್ಲ.

Exit mobile version