ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ರಾ.ಹೆ.66ರ ಬೈಪಾಸ್ ಬಳಿ ತಡರಾತ್ರಿ ನಿಲ್ಲಿಸಿದ ಎರಡು ಲಾರಿಗಳಿಗೆ ಭಟ್ಕಳ ಕಡೆಗೆ ಮೀನು ತುಂಬಿಸಿಕೊಂಡು ಹೋಗುತ್ತಿದ್ದ ಇನ್ಸುಲೇಟರ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಮೂರೂ ವಾಹನಗಳ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ ಎರಡೂ ಲಾರಿಯ ಚಾಲಕರಿಗೆ ಗಾಯಗಳಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಿಪ್ಪರ್ ಹಾಗೂ ಸರಕು ಸಾಗಾಣಿಕೆ ಲಾರಿಯ ಚಾಲಕರು ವಾಹನಗಳನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಮಾತನಾಡುತ್ತಿರುವಾಗ ಕುಂದಾಪುರದ ಕಡೆಯಿಂದ ಭಟ್ಕಳದ ಕಡೆಗೆ ಮೀನು ತುಂಬಿಸಿಕೊಂಡು ಹೋಗುತ್ತಿದ್ದ ಇನ್ಸುಲೇಟರ್ ಚಾಲಕ ಬೇರೊಂದು ವಾಹನವನ್ನು ಓವರ್‌ಟೇಕ್ ಮಾಡಿಕೊಂಡು ಬರುವ ಭರದಲ್ಲಿ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿದ್ದರಿಂದ ಮಾತನಾಡುತ್ತಾ ನಿಂತಿದ್ದ ಚಾಲಕ ಸನ್ನಿ ಡಯಾಸ್ ಮತ್ತು ಗಣೇಶ ಅವರಿಗೆ ಢಿಕ್ಕಿಯಾಗಿ ಬಳಿಕ ಲಾರಿಗಳಿಗೆ ಗುದ್ದಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.