Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಸರ್ವಿಸ್ ಬಸ್ ಪ್ರಯಾಣ ದರ ಹೆಚ್ಚಳ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ರಾ.ಹೆ. ಪ್ರಾಧಿಕಾರವು ರಾಷ್ಟ್ರಿಯ ಹೆದ್ದಾರಿ 66ರಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್ ಸಂಗ್ರಹ ಆರಂಭಿಸಿದ್ದು, ಟೋಲ್‌ಸಂಗ್ರಹದ ಅಧಿಕ ವೆಚ್ಚ ಹಾಗೂ ತೈಲ ದರ ಹಾಗೂ ಬಿಡಿಭಾಗಗಳ ದರ ಹೆಚ್ಚಳದಿಂದಾಗಿ ಕುಂದಾಪುರ ಖಾಸಗಿ ಸರ್ವಿಸ್ ಬಸ್ಸುಗಳ ದರ ಪರಿಷ್ಕರಿಸಲಾಗಿದೆ ಎಂದು ಕುಂದಾಪುರ ತಾಲೂಕ್ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ತಿಳಿಸಿದ್ದಾರೆ.

ಫೆ.17ರಿಂದ ಕನಿಷ್ಠದರ 8 ರೂ ಮತ್ತು 20 ರೂ. ವರಗಿನ ಸ್ಟೇಜ್ ಮೇಲೆ 1ರೂ ಮತ್ತು 40 ರೂ.ವರೆಗಿನ ಸ್ಟೇಜ್ ಮೇಲೆ ರೂ.2 ಎರಿಸಲಾಗುತ್ತಿದೆ. ಟೋಲ್ ದಾಟುವ ಬಸ್ಸುಗಳಿಗೆ ರೂ.3 ದರ ಹೆಚ್ಚಿಸಿ ನಿಗದಿ ಮಾಡಲಾಗಿದ್ದು, ಎಲ್ಲಾ ಬಸ್ಸು ಮಾಲಕರಿಗೆ ದರ ಹೆಚ್ಚಿಸಲು ಸೂಚಿಸಲಾಗಿದೆ. ಈ ದರ ಪಟ್ಟಿ ಕೆನರಾ ಬಸ್ಸು ಮಾಲಕರ ಸಂಘದ ನಿಬಂಧನೆಗೆ ಒಳ ಪಟ್ಟಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಸ್ಸು ಮಾಲಕರ ಸಂಘದ ಕಾರ್ಯದರ್ಶಿ ವಿಜಯ ಕುಮಾರ್ ಶೆಟ್ಟಿ ಜಡ್ಡಾಡಿ, ಸುಪ್ರೀತ್ ಚಾತ್ರ, ರಾಘವೇಂದ್ರ, ಸದಸ್ಯರಾದ ನಾಗೇಶ್, ರಾಧಾದಾಸ್ ಮತ್ತು ಸಚ್ಚಿದಾನಂದ ಶೆಟ್ಟಿ ಆಲೂರು ಉಪಸ್ಥಿತರಿದ್ದರು.

Exit mobile version