Site icon Kundapra.com ಕುಂದಾಪ್ರ ಡಾಟ್ ಕಾಂ

ಹಾಕೀಸ್ ಬೇ ಕಪ್ ಟೂರ್ನಿಗೆ ಭಾರತದ ಮಹಿಳಾ ತಂಡ

ಕರ್ನಾಟಕದ ಎಂ.ಎನ್. ಪೊನ್ನಮ್ಮ ಸೇರಿದಂತೆ ರಿತುರಾಣಿ ಸಾರಥ್ಯದ 18 ಮಂದಿ ಸದಸ್ಯರನ್ನೊಳಗೊಂಡ ಭಾರತ ಮಹಿಳಾ ಹಾಕಿ ತಂಡವನ್ನು ನ್ಯೂಜಿಲೆಂಡ್‌ನಲ್ಲಿ ಏ.11 ರಿಂದ 19ರ ವರೆಗೆ ನಡೆಯಲಿರುವ ಹಾಕೀಸ್ ಬೇ ಕಪ್ ಟೂರ್ನಿಗೆ ಪ್ರಕಟಿಸಿಲಾಗಿದೆ.

ಟೂರ್ನಿಯಲ್ಲಿ ಭಾರತವಲ್ಲದೆ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಚೀನಾ, ಜಪಾನ್, ಕೊರಿಯಾ, ಅಮೆರಿಕ ಮತ್ತು ಆತಿಥೇಯ ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ.

ರಿತು ರಾಣಿ ನಾಯಕಿಯಾಗಿ ಮುಂದುವರಿದರೆ, ಡಿಫೆಂಡರ್ ದೀಪಿಕಾ ಉಪನಾಯಕಿಯ ಸ್ಥಾನ ನಿರ್ವಹಿಸಲಿದ್ದಾರೆ. ಭಾರತ ಏ.11 ರಂದು ಚೀನಾ ವಿರುದ್ಧ ಅಭಿಯಾನ ಆರಂಭಿಸಲಿದೆ. ಬೆಲ್ಜಿಯಂನಲ್ಲಿ ನಡೆಯಲಿರುವ ಮುಂಬರುವ ಪ್ರಮುಖ ಹಾಕಿ ವಿಶ್ವ ಲೀಗ್ ಸೆಮಿಫೈನಲ್‌ಗೆ ಈ ಟೂರ್ನಿ ಪ್ರದರ್ಶನದ ವೇದಿಕೆಯಾಗಿದೆ.

ತಂಡ ಇಂತಿದೆ
ಗೋಲ್‌ಕೀಪರ್: ಸವಿತಾ, ರಜನಿ ಎತಿಮಾರ್ಪು; ಡಿಫೆಂಡರ್ಸ್: ದೀಪ್ ಗ್ರಾಸ್ ಎಕ್ಕಾ, ದೀಪಿಕಾ, ಸುನಿತಾ, ಲಾಕ್ರಾ, ಸುಶೀಲಾ ಚಾನು, ಎಂ.ಎನ್.ಪೊನ್ನಮ್ಮ, ಮೋನಿಕಾ; ಮಿಡ್‌ಫೀಲ್ಡರ್: ರಿತು ರಾಣಿ, ನಮಿತಾ ಟೊಪ್ಪೊ, ಲಿಲಿಮಾ ಮಿನ್ಜ್, ಲಿಲಿಯ್ ಚಾನು, ನವ್‌ಜೋತ್ ಕೌರ್, ಸೌಂದರ್ಯ ಯೆಂದಳಾ. ಫಾರ್ವರ್ಡ್ಸ್: ವಂದನಾ ಕಟಾರಿಯಾ, ರಾಣಿ ಪೂನಮ್ ರಾಣಿ, ಅನುರಾಧ ಥೊಕ್ಕೊಮ್.

Exit mobile version