Site icon Kundapra.com ಕುಂದಾಪ್ರ ಡಾಟ್ ಕಾಂ

ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಮನ್ಮಹಾರಥೋತ್ಸವ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಉಳ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮದಿಂದ ಜರುಗಿತು.

ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತ ರವಿ ಕೋಟಾರಗಸ್ತಿ, ಉಳ್ಳೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಉಳ್ತೂರು ಮೋಹನದಾಸ ಶೆಟ್ಟಿ ಕಟ್ಟೆಮನೆ, ಜೀಣೋದ್ಧಾರ ಸಮಿತಿ ಮುಂಬೈ ಘಟಕದ ಅಧ್ಯಕ್ಷ ಸುರೇಶ್ ಎ. ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಂದ್ರ ಹೆಗ್ಡೆ, ಪ್ರಧಾನ ಅರ್ಚಕ ಸೀತಾರಾಮ ಅಡಿಗ, ಚನ್ನಕೇಶವ ಅಡಿಗ, ಜೀಣೋದ್ಧಾರ ಸಮಿತಿ ಗೌರವ ಕಾರ್ಯಧ್ಯಕ್ಷ ಹೆಬ್ರಿಬೀಡು ದೇವಪ್ಪ ಮಲ್ಲಿ, ಸಹಕಾಯಾಧ್ಯಕ್ಷ ಬಿ. ಚಂದ್ರಕಾಂತ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯು. ಭೋಜರಾಜ ಶೆಟ್ಟಿ, ಉಳ್ತೂರು ಕೋಶಾಧಿಕಾರಿಗಳು ಸೀತಾರಾಮ ಶೆಟ್ಟಿ ಕಟ್ಟೆಮನೆ, ಎಂ. ಶ್ರೀಧರ ಶೆಟ್ಟಿ ಮಲ್ಯಾಡಿ, ಉಪಾಧ್ಯಕ್ಷರಾದ ಎಂ. ಜಯಶೀಲ ಶೆಟ್ಟಿ, ಸುಧಾಕರ ಶೆಟ್ಟಿ ಸಾವಂತರ ಮನೆ ವ್ಯವಸ್ಥಾಪನಾ ಸಮಿತಿ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಾಮೂಹಿಕ ಅನ್ನಪ್ರಸಾದ ಸೇವಾಕರ್ತರಾದ ಕಾಳಾವರ ಸಾವಂತರ ಮನೆ ಗಿರಿಜಮ್ಮ ಶೆಡ್ತಿ ಸ್ಮರಣಾರ್ಥ ಎಂ. ಮುತ್ತಯ್ಯ ಶೆಟ್ಟಿ ಮತ್ತು ಮಕ್ಕಳು ಓಂ ಪ್ರಸಾದ್ ಉಳ್ತೂರು ಇವರಿಂದ ಸಾಮೂಹಿಕ ಅನ್ನಪ್ರಸಾದ ಸಂತರ್ಪಣೆ ಜರುಗಿತು. ಉಳ್ತೂರು ಶೇರಿಗಾರ ಮನೆ ಮಹಾಬಲ ಶೆಟ್ಟಿ ಮತ್ತು ಗುಲಾಬಿ ಶೆಡ್ತಿ ಇವರ ಸ್ಮರಣಾರ್ಥ ಅವರ ಮಕ್ಕಳಾದ ಜಯಪ್ರಕಾಶ್ ಶೆಟ್ಟಿ ಮತ್ತು ಸಃಓದರರ ಆಯೋಜನೆಯಲ್ಲಿ ರಾತ್ರಿ ಸಂಗೀತ ವಿದ್ಯಾನಿಧಿ ಡಾ. ವಿದ್ಯಾಭೂಷಣ ಇವರಿಂದ ಭಕ್ತಿಗಾಯನ ಪ್ರದರ್ಶನಗೊಂಡಿತು.

 

Exit mobile version