Kundapra.com ಕುಂದಾಪ್ರ ಡಾಟ್ ಕಾಂ

ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಜೊತೆಯಲ್ಲಿ ಉತ್ತಮ ರಿಮಾರ್ಕ್ಸ್ ಬೇಕು: ವಿಠಲ ನಾಯ್ಕ್

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಮಾರ್ಕ್ಸ್ ಒಂದೇ ಮುಖ್ಯವಲ್ಲ ಅದರ ಜೊತೆಯಲ್ಲಿ ರಿಮಾರ್ಕ್ಸ್ ಅಗತ್ಯವಾಗಿದೆ. ಇತ್ತೀಚಿನ ಮಕ್ಕಳು ತಮ್ಮ ತಂದೆ-ತಾಯಿಯಂದಿರ ಮಾತು ಕೇಳುವಷ್ಟು ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಹಾಗೂ ಪೋಷಕರಿಗೂ ತಾಳ್ಮೆ ಮುಖ್ಯ. ನಮ್ಮ ಮಕ್ಕಳಿಗೆ ಆಸ್ತಿ ಮಾಡುವುದರಕ್ಕಿಂತ ಮಕ್ಕಳೇ ಆಸ್ತಿ ಎಂದು ಭಾವಿಸಬೇಕು ಎಂದು ವಿಠಲ ನಾಯ್ಕ್ ವಿಟ್ಲ ಹೇಳಿದರು.

ರಾಜರಾಜೇಶ್ವರಿ ಸಭಾಭವನ ಜರುಗಿದ ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರಿನ ಪ್ರೌಡಶಾಲೆ ವಿಭಾದ ಪೋಷಕರ ಸಭೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಮಕ್ಕಳು ಯಾವುದನ್ನು ಕಲಿಯಬೇಕು, ಯಾವುದನ್ನು ಕೇಳಿಸಿಕೊಳ್ಳಬೇಕು, ಯಾವುದನ್ನು ನೋಡಬೇಕು, ಎನ್ನುವುದು ಮಕ್ಕಳ ಮನಸ್ಸಿನಲ್ಲಿ ಬರಬೇಕು. ಆದರೆ ಮಕ್ಕಳ ಮನಸ್ಸುಗಳು ಇತ್ತೀಚ್ಛಿಗೆ ತತ್ರಜ್ಞಾನಗಳು ಬಂದ ನಂತರ ಸಂಬಂಧಗಳು ಕಡಿಮೆಯಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಕೇವಲ ಓದು ಓದು ಎಂದು ಹೇಳಿದರೆ, ಮಕ್ಕಳ ಮನಸ್ಸುಗಳು ಕೇವಲ ಓದುದರಲ್ಲಿ ಮಾತ್ರ ಸೀಮಿತವಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಓದುದರ ಜೊತೆಯಲ್ಲಿ ಸಾಂಸ್ಕೃತಿಕಗಳಲ್ಲಿ ಭಾಗವಹಿಸುವ ಕಾರ್ಯವನ್ನು ಪೋಷಕರು ಮಾಡಬೇಕು.ಬಹಳ ಮುಖ್ಯವಾಗಿ ಮಕ್ಕಳು ತಮ್ಮ ತಂದೆ-ತಾಯಿಯಂದಿರ ಆರ್ಥಿಕ ಪರಿಸ್ಥೀತಿಗಳನ್ನು ನೋಡಬೇಕು ಎಂದರು.

ಈ ಸಂದರ್ಭದಲ್ಲಿ ಬೈಂದೂರಿನ ಶಾಸಕರಾದ ಹಾಗೂ ಕರ್ನಾಟಕ ಸಾರಿಗೆ ನಿಮಗದ ನೂತನ ಅಧ್ಯಕ್ಷರಾದ ಕೆ.ಗೋಪಾಲ ಪೂಜಾರಿಯವರಿಗೆ ಸಮ್ಮಾನಿಸಲಾಯಿತು. ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದ ವಿಠಲ ನಾಯ್ಕ ವಿಟ್ಲ ಇವರಿಗೂ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಪ್ರೌಡಶಾಲಾ ವಿಭಾಗದ ಪ್ರಾಂಶುಪಾಲರಾದ ಜ್ಯೋತಿ ಶ್ರೀನಿವಾಸ, ಉಡುಪಿ ಜಿಲ್ಲಾ ಕೆಡಿಪಿ ಸದಸ್ಯರಾದ ಎಸ್. ರಾಜು ಪೂಜಾರಿ, ಶಾಲಾ ಎಸ್.ಡಿ.ಎಮ್.ಸಿ ಸದಸ್ಯಗಳಾದ ನಾಗರಾಜ್ ಗಾಣಿಗ, ಆನಂದ ಶೆಟ್ಟಿ ನಾಕಟ್ಟೆ, ವಸಂತ ಹೆಗ್ಡೆ ಅರೆಶಿರೂರು, ಮಣಿಕಂಠ ದೇವಾಡಿಗ,ಮೊದಲಾದವರು ಉಪಸ್ಥಿತಿದ್ದರು. ಜ್ಯೋತಿ ಶ್ರೀನಿವಾಸ ಸ್ವಾಗತಿಸಿ, ನಾರಾಯಣ ರಾಜು ಇವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದ್ದರು.

Govt pre-university college byndoor

Exit mobile version