ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ತಮ್ಮ ಹೊಸ ಗೂಟದ ಕಾರಿನಲ್ಲಿ ಪತ್ನಿ ಮಮತಾ ಜಿ. ಪೂಜಾರಿ ಹಾಗೂ ಸಹೋದರಿಯೊಂದಿಗೆ ಕೊಲ್ಲೂರು ದೇವಳಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ತಮ್ಮ ಕಾರಿಗೆ ಪೂಜೆ ನೆರವೇರಿಸಿ ನಂತರ ಕ್ಷೇತ್ರದ ಗಜರಾಜನಿಂದ ದಂಪತಿಗಳು ಆಶೀರ್ವಾದ ಪಡೆದರು. ಈ ಸಂದರ್ಭ ದೇವಳದ ಎಇಒ ಎಚ್. ಕೃಷ್ಣಮೂರ್ತಿ, ಸಾಮಾಜಿಕ ಕಾರ್ಯಕರ್ತ ಕೆ. ರಮೇಶ ಗಾಣಿಗ, ಗ್ರಾಪಂ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಮಾವಿನಕಾರು, ಮಾಜಿ ಅಧ್ಯಕ್ಷ ಕೆ. ಎನ್. ವಿಶ್ವನಾಥ ಅಡಿಗ, ಸದಸ್ಯರಾದ ಎಸ್. ಕುಮಾರ್, ಪ್ರಕಾಶ ಪೂಜಾರಿ, ಮುಖಂಡರಾದ ವಾಸು ಹೆಗ್ಡೆಹಕ್ಲು, ಸನತ್ ಬಳೆಗಾರ್, ರಾಜೇಶ್ ದಳಿ ಮತ್ತಿತರರು ಇದ್ದರು.
