Site icon Kundapra.com ಕುಂದಾಪ್ರ ಡಾಟ್ ಕಾಂ

ಐಸಿಸಿ ರ‌್ಯಾಂಕಿಂಗ್: 2ನೇ ಸ್ಥಾನದಲ್ಲಿ ಭಾರತ

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಿಸಿದ ನೂತನ ಏಕದಿನ ಕ್ರಿಕೆಟ್ ರ‌್ಯಾಂಕಿಂಗ್‌ನಲ್ಲಿ ಭಾರತ ತಂಡ ಎರಡನೇ ಸ್ಥಾನ ಕಾಯ್ದುಕೊಂಡಿದೆ. ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ ಕಾರಣ ಭಾರತಕ್ಕೆ ಈ ಸ್ಥಾನ ತೃಪ್ತಿಪಟ್ಟುಕೊಳ್ಳಬೇಕಿದೆ.

ಒಟ್ಟು 116 ಅಂಕ ಗಳಿಸಿರುವ ಭಾರತ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಕ್ಕಿಂತ 6 ಅಂಕ ಹಿಂದೆ ಬಿದ್ದಿದೆ. ಆಸ್ಟ್ರೇಲಿಯಾ 122 ಅಂಕ ಗಳಿಸಿ ಅಗ್ರ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ (112), ಶ್ರೀಲಂಕಾ (108), ನ್ಯೂಜಿಲೆಂಡ್ (107), ಇಂಗ್ಲೆಂಡ್ (101), ಪಾಕಿಸ್ತಾನ (95) ಉಳಿದ ಸ್ಥಾನ ಪಡೆದಿವೆ.

ಭಾರತ ತಂಡದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅಗ್ರ 10 ಆಟಗಾರರ ಪೈಕಿ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಭಾರತದ ಪರ ಅಗ್ರ ಸ್ಥಾನದಲ್ಲಿದ್ದು, 4ನೇ ರ‌್ಯಾಂಕ್ ಗಳಿಸಿದ್ದಾರೆ. ಧವನ್ 6ನೇ ಹಾಗೂ ಧೋನಿ 8ನೇ ಸ್ಥಾನ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ನಾಯಕ ಎಬಿ ಡಿಬಿಲಿಯರ್ಸ್‌ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.

Exit mobile version