Kundapra.com ಕುಂದಾಪ್ರ ಡಾಟ್ ಕಾಂ

ಹಕ್ಲಾಡಿ ಬಾಳೆಮನೆ ಕುಟುಂಬಸ್ಥರ ನಾಗಮಂಡಲಕ್ಕೆ ಹೊರೆ ಕಾಣಿಕೆ ಸಮರ್ಪಣೆ

?????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಕ್ಲಾಡಿ ಗ್ರಾಮಸ್ಥರ ಸಹಕಾರದಲ್ಲಿ ಬಾಳೆಮನೆ ಮೂಲ ನಾಗಬನದಲ್ಲಿ ಬಾಳೆಮನೆ ಕುಟುಂಬದವರು ನಡೆಸುವ ಚತುಷ್ಪವಿತ್ರ ನಾಗಮಂಡಲೋತ್ಸವಕ್ಕೆ ಭಕ್ತರು ಶುಕ್ರವಾರ ಹೊರೆಕಾಣಿಕೆ ಸಮರ್ಪಿಸಿದರು.

ಹೊಳ್ಮಗೆ, ಬಗ್ವಾಡಿ, ಬಾರಂದಾಡಿ, ಮಾಣಿಕೊಳಲು, ನೂಜಾಡಿ ಪರಿಸರದ ನಾಗ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದು ಬಾಳೆಮನೆ ಗದ್ದೆಯಲ್ಲಿರುವ ಉಗ್ರಣಕ್ಕೆ ತರಕಾರಿ, ಕಾಯಿ, ಬಾಳೆಗೊನೆ, ಸಿಂಗಾರ, ನಾಗಮಂಡಲಕ್ಕೆ ಬೇಕಾಗುವ ವಿವಿಧ ವಸ್ತುಗಳ ಒಪ್ಪಿಸಿದರು.

ನೂರಾರು ಮಹಿಳೆಯರು ಕಲಶ ಹಿಡಿದು ಸಾಗಿಬಂದರೆ, ತೊಟ್ಟಿರಾಯ, ಯಕ್ಷಗಾನ ವೇಷ, ಬ್ಯಾಂಡ್ ಸೆಟ್ ಮೂಲಕ ಹತ್ತಾರು ವಾಹನದಲ್ಲಿ ಹೊರೆ ಕಾಣಿಕೆ ವಾಹನ ಸಾಲಾಗಿ ಸಾಗಿ ಬಂತು.

ಆಲೂರು, ನಾಡಾ ಹಕ್ಲಾಡಿ ಗುಡ್ಡೆ, ಯಳೂರು, ತೊಪು, ಬಟ್ಟೆಕುದ್ರು ಪರಿಸರ ಹಾಗೂ ಹೊರ ಗ್ರಾಮದ ಸಾವಿರಕ್ಕೂ ಮಿಕ್ಕ ಭಕ್ತರು ಹೊರೆ ಕಾಣಿಕೆ ಸಮರ್ಪಿಸದರು. ನಾಗಮಂಡಲ ಮುಂದಾಳು ಬಾಳೆಮನೆ ಸಂತೋಷ ಕುಮಾರ್ ಶೆಟ್ಟಿ ಹಕ್ಲಾಡಿ ಹಾಗೂ ಬಾಳೆಮನೆ ಹಿರಿಯರು ಹೊರೆ ಕಾಣಿಕೆ ತಂದ ಎಲ್ಲರಿಗೂ ಶಾಲು ಹೊದಿಸಿ ಗೌರವಿಸಿದರು. ಚತುಷ್ಪವಿತ್ರ ನಾಗಮಂಡಲ ತಯಾರಿ ಕೂಡಾ ಭರದಿಂದ ಸಾಗುತ್ತಿದೆ.

ವೇ.ಮೂ.ಚೆನ್ನಕೇಶವ ಉಪಾಧ್ಯಾಯ, ಹಕ್ಲಾಡಿ ಗ್ರಾಮ ಪಂಚಾಯತ್ ಉಪಾಧಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ, ಗ್ರಾಪಂ ಸದಸ್ಯ ಸುಧಾಕರ ಶೆಟ್ಟಿ ಕೋಟಿ, ನಿವೃತ್ತ ಮುಖ್ಯಶಿಕ್ಷಕ ರಾಜೀವ ಶೆಟ್ಟಿ ಹೊಳ್ಮಗೆ, ನಿವೃತ್ತ ಶಿಕ್ಷಕ ನಾರಾಯಣ ಶೆಟ್ಟಿ, ಶಿಕ್ಷಕ ಸದಾಶಿವ ಶೆಟ್ಟಿ ಸೇನಾಪುರ, ನಿವೃತ್ತ ಶಿಕ್ಷಕ ನರಸಿಂಹ ಶೆಟ್ಟಿ, ಶಿಕ್ಷಕರಾದ ಚಂದ್ರಹಾಸ ಪುರಾಣಿಕ, ಸಂಜೀವ ಬಿಲ್ಲವ, ಶಂಕರ ಶೆಟ್ಟಿ ಬಗ್ವಾಡಿ, ಆನಗಳ್ಳಿ ನರಸಿಂಹ ಶೆಟ್ಟಿ, ಬೈಂದೂರು ವಲಯ ಮಾಜಿ ಬಿಜೆಪಿ ಅಧ್ಯಕ್ಷ ಪ್ರಣಯ ಕುಮಾರ್ ಶೆಟ್ಟಿ ಯಳೂರು, ವಿಠಲ್ ಶೆಟ್ಟಿ ಬಾಳೆಮನೆ, ಸೂರ ಮೊಗವೀರ ಬಾರಂದಾಡಿ, ಆಲೂರು ಮಾಜಿ ಗ್ರಾಪಂ ಸದಸ್ಯ ರವಿ ಆಲೂರು, ಗಣಪಯ್ಯ ಶೆಟ್ಟಿ ಬಾಳೆಮನೆ, ಸೂರ ಮೊಗವೀರ ಹೊಳ್ಮಗೆ, ಭಾಸ್ಕರ ಶೆಟ್ಟಿ ಬಾಳೆಮನೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳು ಸದಸ್ಯರು ಇದ್ದರು.

 

Exit mobile version