Kundapra.com ಕುಂದಾಪ್ರ ಡಾಟ್ ಕಾಂ

ಕಂಚುಗೋಡು: ಕೊಂಕಣಿ ಖಾರ್ವಿ ಸಮಾಜಬಾಂಧವರ ನವ ಚೈತನ್ಯ ಟ್ರೋಫಿ ಉದ್ಘಾಟನೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಯುವಜನತೆ ದೇಶದ ಬೆನ್ನೆಲುಬು. ದೇಶ ಕಟ್ಟುವ ಕಾಯಕದಲ್ಲಿ ಯುವ ಜನತೆಯ ಪಾತ್ರ ಬಹುಮುಖ್ಯ. ಕಬ್ಬಡಿಯು ನಮ್ಮ ದೇಶದ ಕ್ರೀಡೆಯಾಗಿರುವುದರಿಂದ ನಾವು ಈ ಕ್ರೀಡೆಯನ್ನು ಗೌರವಿಸಬೇಕಿದೆ. ಕಠಿಣ ಪರಿಶ್ರಮದಿಂದ ಕ್ರೀಡಾ ತರಬೇತಿಯನ್ನು ಪಡೆದುಕೊಂಡು ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ಅವರು ಕಂಚುಗೋಡು ನವಸಂಘದ ೨೫ನೇ ವಾರ್ಷಿಕೋತ್ಸವದ ಪ್ರಯುಕ್ತ ಕೊಂಕಣಿ ಖಾರ್ವಿ ಸಮಾಜಬಾಂಧವರಿಗಾಗಿ ಹಮ್ಮಿಕೊಂಡ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ’ನವ ಚೈತನ್ಯ ಟ್ರೋಫಿ’ ನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೊಸಾಡು ಗ್ರಾಪಂ ಉಪಾಧ್ಯಕ್ಷೆ ವಂದನಾ ಜೆ.ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕ ಚೌಕಿ ಶಂಕರ ಖಾರ್ವಿ, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ.ಮಂಜುನಾಥ, ಗಂಗೊಳ್ಳಿ ಗ್ರಾಪಂ ಸದಸ್ಯ ವೈ.ಶ್ರೀನಿವಾಸ ಖಾರ್ವಿ, ಶೇಖರ ಖಾರ್ವಿ ಕುಂದಾಪುರ, ಸದಾನಂದ ಖಾರ್ವಿ ಮದ್ದುಗುಡ್ಡೆ, ಸುಧಾಕರ ಖಾರ್ವಿ ಕುಂದಾಪುರ, ಸಂಘದ ಅಧ್ಯಕ್ಷ ಚೌಕಿ ಅಶೋಕ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ಶಂಕರ ಖಾರ್ವಿ ಎಲ್‌ಐಸಿ ಸ್ವಾಗತಿಸಿದರು. ಅಧ್ಯಾಪಕ ರಾಜೇಶ ಮತ್ತು ರಘು ವಿ.ಕೆ. ಕಾರ್ಯಕ್ರಮ ನಿರೂಪಿಸಿದರು. ಉದಯ ಖಾರ್ವಿ ವಂದಿಸಿದರು.

Exit mobile version