Kundapra.com ಕುಂದಾಪ್ರ ಡಾಟ್ ಕಾಂ

ಕೊಂಕಣಿ ಖಾರ್ವಿ ಸಮಾಜದ ಅಭಿವೃದ್ಧಿಗೆ ಅನೇಕ ನೆರವು: ಕೆ. ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಕೊಂಕಣಿ ಖಾರ್ವಿ ಸಮಾಜದ ಅಭಿವೃದ್ಧಿಗೆ ಅನೇಕ ನೆರವು ನೀಡಲಾಗಿದೆ. ತ್ರಾಸಿಯಲ್ಲಿ ಕೊಂಕಣಿ ಖಾರ್ವಿ ಸಮುದಾಯ ಭವನ ನಿರ್ಮಾಣಕ್ಕೆ ಸರಕಾರದಿಂದ ಒಂದು ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಎಂದು ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನಲೆಯಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ವತಿಯಿಂದ ಕಟ್‌ಬೇಲ್ತೂರಿನ ತಮ್ಮ ಸ್ವಗೃಹದಲ್ಲಿ ಭಾನುವಾರ ನಡೆದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಗಂಗೊಳ್ಳಿಯಲ್ಲಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು, ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ಗಂಗೊಳ್ಳಿಯಲ್ಲಿ ಸೀಮೆಎಣ್ಣೆ ಬಂಕ್ ಪ್ರಾರಂಭ ಮಾಡಲಾಗುವುದು ಎಂದು ಹೇಳಿದ ಅವರು ಈ ಸನ್ಮಾನಕ್ಕಿಂತ ಕ್ಷೇತ್ರದಲ್ಲಿ ಜನಸೇವಕನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕ್ಷೇತ್ರದ ಜನರು ಮಾಡುವ ಆಶೀರ್ವಾದವೇ ಅತಿ ದೊಡ್ಡ ಸನ್ಮಾನ ಎಂದು ನುಡಿದರು.

ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಅಧ್ಯಕ್ಷ ಕೆ.ಬಿ.ಖಾರ್ವಿ, ಪ್ರಧಾನ ಕಾರ್ಯದರ್ಶಿ ಉಮಾನಾಥ ಗಂಗೊಳ್ಳಿ, ಹಿರಿಯ ಉಪಾಧ್ಯಕ್ಷ ಮೋಹನದಾಸ ಬಾನಾವಳಿಕರ್, ಖಜಾಂಚಿ ಜಿ.ಪುರುಷೋತ್ತಮ ಆರ್ಕಾಟಿ, ಕೇಂದ್ರ ಕಾರ್ಯದರ್ಶಿ ದಿನಕರ ಖಾರ್ವಿ, ಕೃಷ್ಣ ಖಾರ್ವಿ, ಪ್ರಕಾಶ ಖಾರ್ವಿ, ಲಕ್ಷ್ಮಣ ಖಾರ್ವಿ, ಸತೀಶ ಖಾರ್ವಿ ಜಿ.ಎನ್., ಮಾಧವ ಖಾರ್ವಿ, ಎಂ.ಜಿ.ಬಾನಾವಳಿಕರ್, ಸೂರ್ಯಕಾಂತ ಖಾರ್ವಿ, ವಿಜಯ ಖಾರ್ವಿ, ದಿನಕರ ಪಟೇಲ್, ಅರುಣ ಖಾರ್ವಿ, ನಿತ್ಯಾನಂದ ಜಿ.ಟಿ., ಮಂಜುನಾಥ ಖಾರ್ವಿ, ಲೋಕೇಶ ಖಾರ್ವಿ, ಸುರೇಖಾ ಕಾನೋಜಿ, ಉಮಾ ಖಾರ್ವಿ, ಸರೋಜಿನಿ ಖಾರ್ವಿ, ಕುಂದಾಪುರ ಹಾಗೂ ಗಂಗೊಳ್ಳಿ ಘಟಕದ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

 

Exit mobile version