ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್‌ನಲ್ಲಿ ತೆರಾಲಿ ಹಬ್ಬದ ಪೂರ್ವಭಾವಿಯಾಗಿ ಬಂಧು ಬಾಂಧ್ಯವ್ಯದ ಹಬ್ಬ ಕೊಂಪ್ರಿಪೆಸ್ಟ್ ಉಡುಪಿಯ ಧರ್ಮಗುರುಗಳಾದ ರೆ.ಪಾ.ವಿಲಿಯಂ ಮಾರ್ಟಿಸ್ ಮತ್ತು ಬೈಂದೂರು ಚರ್ಚಿನ ಧರ್ಮಗುರುಗಳಾದ ರೆ.ಪಾ.ರೋನಾಲ್ಡ್ ಮಿರಾಂದ ಅವರ ನೇತೃತ್ವದಲ್ಲಿ ಜರಗಿತು. ಹೋಲಿಕ್ರಾಸ್ ಚರ್ಚ್‌ನಿಂದ ಗಾಂಧಿ ಮೈದಾನದ ವರೆಗೆ ಯೇಸುಕ್ರಿಸ್ತ್‌ನ ಪರಮಪ್ರಸಾದವನ್ನು ಪುರ ಮೆರವಣಿಗೆ ಜರುಗಿತು. ಬೈಂದೂರು ಭಾಗದ ನೂರಾರು ಕ್ರೈಸ್ತ ಭಾಂದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿವಿಧ ಟ್ಯಾಬ್ಲೊಗಳ ಗಮನ ನೋಡುಗರ ಗಮನ ಸೆಳೆದವು.