Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕಿನಾದ್ಯಂತ ಶಿವನಾಮ ಸ್ಮರಣೆ, ಪುನೀತರಾದ ಭಕ್ತರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹತ್ತಾರು ಈಶ್ವರ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆಗೆ ಭಕ್ತಿ ಭಾವದಿಂದ ನಡೆಯುತ್ತಿದೆ. ಸಹಸ್ರಾರು ಭಕ್ತರು ತಮ್ಮ ಸಮೀಪದ ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿಪೂರ್ವಕವಾಗಿ ಶ್ರೀ ದೇವರಿಗೆ ನವಿಸಿ ಶಿವಸ್ತುತಿ, ಶಿವನಾಮ ಪಾರಾಯಣದಿಂದ ಪುನಿತರಾದರು. ಶಿವರಾತ್ರಿ ಉಪವಾಸವನ್ನು ಕೈಗೊಂಡು ಕೃತಾರ್ಥರಾದರು.

ಶಿವರಾತ್ರಿಯ ಅಂಗವಾಗಿ ಬೈಂದೂರು ವಣಕೊಡ್ಲುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗವನ್ನು ಮುಟ್ಟಿ ಪೂಜಿಸುವ ಅಪೂರ್ವ ಅವಕಾಶವಿದ್ದರೇ ಗುಜ್ಜಾಡಿಯ ಗುಹೇಶ್ವರ ದೇವಾಲಯದಲ್ಲಿ ಗುಹೆಯ ಒಳಗೆ ದೇವರ ದರ್ಶನ ಪಡೆಯವ ಅವಕಾಶ ಭಕ್ತರದ್ದಾಗಿತ್ತು. ಐತಿಹಾಸಿಕ ಹಾಗೂ ಐತಿಹ್ಯವಿರುವ ಶಿವಾಲಯಗಳಿಗೆ ಭಕ್ತ ದಂಡು ಹರಿದು ಬಂದಿತ್ತು. ವಣಕೊಡ್ಲುವಿನಲ್ಲಿ ಶಿವರಾತ್ರಿಯಂದು ಮಾತ್ರ ಸ್ವರ್ಶಪೂಜೆ ಮಾಡುವ ಅವಕಾಶವಿರುವುದರಿಂದ 2-3 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತ ಬಳಿಕ ದರ್ಶನ ಪಡೆಯುವಂತಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು ಐತಿಹಾಸಿಕ ಶ್ರೀ ಸೇನೇಶ್ವರ ದೇವಾಲಯ, ಪಡುವರಿಯ ಶ್ರೀ ಸೋಮೇಶ್ವರ ದೇವಾಲಯ, ಕಿರಿಮಂಜೇಶ್ವರದ ಶ್ರೀ ಅಗಸ್ತೇಶ್ವರ ದೇವಾಲಯ, ಹೆರಂಜಾಲಿನ ಶ್ರೀ ಗುಡೆಮಹಾಲಿಂಗೇಶ್ವರ ದೇವಾಲಯ, ಮರವಂತೆ ಶ್ರೀ ಗಂಗಾಧರೇಶ್ವರ ದೇವಾಲಯ, ಗಂಗೊಳ್ಳಿಯ ಶ್ರೀ ವೀರಶೈವ ದೇವಸ್ಥಾನ, ಶ್ರೀ ಇಂದುಧರ ದೇವಾಲಯ, ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಾಲಯ, ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಮೂಡುಗಲ್ಲು ಶ್ರೀ ಕೇಶವನಾಥ ದೇವಾಲಯ, ಕುಂದಾಪುರದ ಶ್ರೀ ಕುಂದೇಶ್ವರ ದೇವಾಲಯ, ಕೊಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಾಲಯ, ಹಿಲ್ಕೋಡು ಶ್ರೀ ಮಹಾಲಿಂಗೇಶ್ವರ ದೇವಾಲಯ, ಶ್ರೀ ಕುಂಭಾಶಿ ಶ್ರೀ ಹರಿಹರ ಕ್ಷೇತ್ರ, ಬಸ್ರೂರು ಮಹಾಲಿಂಗೇಶ್ವರ ದೇವಾಲಯ, ಕುಂದಾಪ್ರ ಡಾಟ್ ಕಾಂ. ಪಂಚ ಶಂಕರನಾರಾಯಣ ಕ್ಷೇತ್ರಗಳಾದ ಬೆಳ್ವೆ ಶ್ರೀ ಶಂಕರನಾರಾಯಣ, ಆವರ್ಸೆ ಶ್ರೀ ಶಂಕರನಾರಾಯಣ, ಮಾಂಡವಿ ಶ್ರೀ ಶಂಕರನಾರಾಯಣ, ಶ್ರೀ ಕ್ರೋಢ ಶಂಕರನಾರಾಯಣ, ಶ್ರೀ ಹೊಳೆ ಶಂಕರನಾರಾಯಣ ದೇವಾಲಯಗಳು, ಆಜ್ರಿ ಶ್ರೀ ತ್ರೈಂಬಕೇಶ್ವರ ದೇವಾಲಯ, ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಾಲಯ, ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು. ರಾತ್ರಿ ಶಿವರಾತ್ರಿಯ ಅಂಗವಾಗಿ ಜಾಗರಣೆ ನಡೆಯಲಿದ್ದು, ಶಿವನಾಮ ಸ್ಮರಣೆ, ಭಜನೆ ನಡೆಯತ್ತದೆ.

ಇದನ್ನೂ ಓದಿ:

► ಗುಜ್ಜಾಡಿ: ಗುಹೆಯೊಳಕ್ಕೆ ಉದ್ಭವಿಸಿಹ ಗುಹೇಶ್ವರನ ಸಾನಿಧ್ಯವೇ ಬೆರಗು – http://kundapraa.com/?p=11872

► ಬೈಂದೂರು: ಶಿವಲಿಂಗ ಸ್ಪರ್ಶಪೂಜೆಯ ವಿಶಿಷ್ಟ ಕ್ಷೇತ್ರ ವಣಕೊಡ್ಲು – http://kundapraa.com/?p=11836

► ಕುಂದಾಪುರದ ಅಧಿದೇವ ಶ್ರೀ ಕುಂದೇಶ್ವರ – http://kundapraa.com/?p=1504

► ಪುರಾಣ ಪ್ರಸಿದ್ಧ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ – http://kundapraa.com/?p=1512

► ಮಾತನಾಡುವ ಮಹಾಲಿಂಗ ಉಳ್ತೂರು ಶ್ರೀ ಮಹಾಲಿಂಗೇಶ್ವರ – http://kundapraa.com/?p=21169

► ಇತಿಹಾಸ ಪ್ರಸಿದ್ಧ ಬೈಂದೂರು ಶ್ರೀ ಸೇನೆಶ್ವರ ದೇವಸ್ಥಾನ – http://kundapraa.com/?p=1526

► ಶ್ರೀ ಕ್ರೋಢ ಶಂಕರನಾರಾಯಣ ದೇವಸ್ಥಾನ – http://kundapraa.com/?p=1514

► ಮೂಡುಗಲ್ಲು: ವಿಸ್ಮಯಕಾರಿ ಗುಹಾಂತರ ಕೇಶವನಾಥ ದೇವಾಲಯ – http://kundapraa.com/?p=1522

ವಣಕೊಡ್ಲುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚಿತ್ರಗಳು

Exit mobile version