Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಶ್ರೀ ಮೈಲಾರೇಶ್ವರ ಯುವಕ ಮಂಡಲ 40ರ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಂಸ್ಕೃತಿಕ ಶೈಕ್ಷಣಿಕವಾಗಿ ಹಾಗೂ ಹಲವಾರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುವ ಮೂಲಕ ರಾಜ್ಯ ಯುವ ಪ್ರಶಸ್ತಿಯನ್ನು ಪಡೆದ ಹೆಮ್ಮೆಯ ಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಇಂಜಿನಿಯರ್ ಕೆ.ರವೀಂದ್ರ ಕಾವೇರಿ ಹೇಳಿದರು.

ಅವರು ಶ್ರೀ ಮೈಲಾರೇಶ್ವರ ಯುವಕ ಮಂಡಲ (ರಿ) ಇದರ 40 ರ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಬೈಂದೂರು ಉದ್ಯಮಿ ಬಿ.ವೆಂಕಟರಮಣ ಬಿಜೂರು, ಕೋಟೇಶ್ವರ ಶ್ರೀ ರಾಮಕ್ಷತ್ರೀಯ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷರಾದ ವಿಶ್ವನಾಥ ಬರಗೆರೆ, ಕೊಲ್ಲುರು ಉದ್ಯಮಿ ಮಂಜುನಾಥ ಶೇರೆಗಾರ, ಗುತ್ತಿಗೆದಾರರಾದ ರಮಾನಾಥ ನಾಯ್ಕ್, ರಮೇಶ ರಾವ್ ಪಡುಕೇರಿ, ಅಂಕಣಕಾರ ಕೋ ಶಿವಾನಂದ ಕಾರಂತ, ಬೈಂದೂರು ರಾಮಕ್ಷತ್ರಿಯ ಸಂಘದ ಆಡಳಿತ ಸದಸ್ಯರಾದ ವಸಂತಿ ನಾರಾಯಣ ಮದ್ದೋಡಿ, ಸಂಸ್ಥೆಯ ಗೌರವ ಅಧ್ಯಕ್ಷರಾದ ಕೆ.ಪಿ.ಶಿವಪ್ರಸಾದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕ್ರತರಾದ ಮಾಲತಿ ಡಿ.ಕೆ, ಹೊಸನಗರ ತಾಲೂಕಿನ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಆಶಾ ಅರುಣ್ ಕುಮಾರ ಬಾಣ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಸ್ತೂರಿ ಸ್ವಾಗತಿಸಿದರು. ಸಸ್ಥೆಯ ಮಾಜಿ ಅಧ್ಯಕ್ಷರಾದ ವರದರಾಜ್ ಪೈ ವರದಿವಾಚಿಸಿದರು, ಡಿ.ಕೆ.ಪ್ರಭಾಕರ ಹಾಗೂ ಡಿ ಸತೀಶ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಗಣೇಶ ಡಿ ನಾಯಕ್ ವಂದಿಸಿದರು.

Exit mobile version