ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಲವು ವರ್ಷಗಳಿಂದ ಚರಂಡಿಯನ್ನು ಒತ್ತುವರಿ ಮಾಡಿ ಕಾರು ಶೇಡ್ ನಿರ್ಮಿಸಿದ್ದ ಜಾಗದ ತೆರವು ಕಾರ್ಯಾಚರಣೆ ನಡೆಯಿತು. ಕುಂದಾಪುರ ಪುರಸಭೆಯ ಏಳನೇ ವಾರ್ಡಿನ ಸದಸ್ಯ ಶ್ರೀಧರ್ ಶೇರೆಗಾರ್ ಅವರ ನೇತೃತ್ವದಲ್ಲಿ ಒತ್ತುವರಿ ಕಾರ್ಯ ನಡೆಯಿತು.
ಕುಂದಾಪುರ ಚಿಕ್ಕನ್ಸಾಲ್ ರಸ್ತೆಯ ಮೈಲಾರೇಶ್ವರ ರಸ್ತೆ ಸಮೀಪದಲ್ಲಿ ಮನೆಯೊಂದರ ಮಾಲಿಕರು ಅನಾದಿ ಕಾಲದಿಂದ ನಿರ್ಮಿಸಲಾಗಿದ್ದ ಚರಂಡಿಗೆ ಹದಿನೈದು ವರ್ಷಗಳ ಹಿಂದೆಯೇ ಶಿಲೆಗಲ್ಲಿನ ಚಪ್ಪಡಿ ಹಾಕಿ ಕಾರಿನ ಶೆಡ್ ನಿರ್ಮಿಸಿದ್ದರು. ಇದರಿಂದ ಚರಂಡಿಯಲ್ಲಿ ತುಂಬಿದ್ದ ಮಣ್ಣನ್ನು ತೆಗೆಯಲಾಗದೇ ಮಳೆಗಾಲದ ನೀರೆಲ್ಲಾ ಮನೆಯೊಳಗೆ ನುಗ್ಗುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿಯೇ ಸಮೀಪದ ಸಸಿಹಿತ್ಲು ಪ್ರದೇಶಕ್ಕೆ ನಡೆದು ಹೋಗಲೂ ಈ ಚರಂಡಿ ಹಿಂದೆ ಬಳಕೆಯಾಗುತ್ತಿದ್ದು, ಒತ್ತುವರಿ ಪರಿಣಾಮ ಸಸಿಹಿತ್ಲು ಪ್ರದೇಶದ ಜನ ಸುತ್ತು ಹಾಕಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಿಂದ ಆಕ್ಷೇಪಣೆಗಳೂ ಕೇಳಿ ಬಂದಿತ್ತಾದರೂ ಪುರಸಭೆ ಒತ್ತುವರೆ ತೆರವು ಕಾರ್ಯಾಚರಣೆ ನಡೆಸಿರಲಿಲ್ಲ. ಕಳೆದ ಮೂರೂವರೆ ವರ್ಷಗಳಿಂದ ಸತತವಾಗಿ ಆ ವಾರ್ಡಿ ಸದಸ್ಯ ಶ್ರೀಧರ ಶೇರೆಗಾರ್ ಅವರು ಒತ್ತುವರಿ ಮಾಡಿಕೊಂಡವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಚರಂಡಿಯ ಎರಡೂ ಕಡೆಯ ಜಮೀನಿನ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು,
ಲಿಂಗಮುದ್ರೆ ಕಲ್ಲು ಪತ್ತೆ:
ಪುರಸಭೆಯ ಜೆಸಿಬಿ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಣ್ಣಿನಡಿಯಲ್ಲಿ ಅನಾದಿಕಾಲದ ಲಿಂಗಮುದ್ರೆ ಕಲ್ಲು ಪತ್ತೆಯಾಗಿದ್ದು ಇದು, ಶೈವ ಪಂಥಕ್ಕೆ ಸಂಬಂಧಿಸಿದ್ದಾಗಿದೆ. ಶೈವ ಪಂಧದ ಕಲ್ಲಿಗೆ ಲಿಂಗಮುದ್ರೆ ಕಲ್ಲು ಎಂಬ ಹೆಸರಿದ್ದು, ದೇವಸ್ಥಾನಗಳ ಉಂಬಳಿ ಬಿಟ್ಟಿದ್ದರೆ ಅದರೆ ಗುರುತಿಸಲು ನಾಲ್ಕು ಕಡೆಯಲ್ಲೂ ಇಂತಾ ಕಲ್ಲು ನೆಡೆಲಾಗುತ್ತದೆ.