Kundapra.com ಕುಂದಾಪ್ರ ಡಾಟ್ ಕಾಂ

ಪ್ಲಾಸ್ಟಿಕ್ ನಿಷೇಧ, ಕಸ ವಿಲೇವಾರಿ: ಜಾಗೃತಿ ಜಾಥಾ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಡ್ತರೆ ಗ್ರಾಮ ಪಂಚಾಯತ್ ಆಯೋಜಿಸಿದ ಪ್ಲಾಸ್ಟಿಕ್ ನಿಷೇಧ, ಕಸ ವಿಲೇವಾರಿಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಜಾಥಾಕ್ಕೆ ಸ್ಥಳೀಯ ಬಿಇಒ ಪ್ರಕಾಶ್ ಚಾಲನೆ ನೀಡಿದರು.

ರತ್ತೂಬಾ ಪ್ರೌಢಶಾಲೆ, ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಪ್ಲಾಸ್ಟಿಕ್ ತ್ಯಾಜ್ಯ ನಿಷೇಧದ ಕುರಿತು ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಗ್ರಾಪಂ
ಸದಸ್ಯರು, ಪಿಡಿಒ ರುಕ್ಕನ ಗೌಡ ಜಾಥಾದ ನೇತೃತ್ವವಹಿಸಿದ್ದರು.

Exit mobile version