Kundapra.com ಕುಂದಾಪ್ರ ಡಾಟ್ ಕಾಂ

ಬಿಎಂಎಸ್ ನೇತೃತ್ವದಲ್ಲಿ ಸಂಸದ ಯಡಿಯೂರಪ್ಪರ ಭೇಟಿ, ವಿವಿಧ ಬೇಡಿಕೆ ಈಡೇರಿಕೆಗೆ ಮನವಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿವಮೊಗ್ಗ ಬೈಂದೂರು ಸಂಸದ ಬಿ. ಎಸ್. ಯಡಿಯೂರಪ್ಪರ ಅವರನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ ಸುಕುಮಾರ ಶೆಟ್ಟಿ ನೇತೃತ್ವದ ತಂಡ ಭೇಟಿ ಮಾಡಿ ಮರವಂತೆ ಕಡಲ್ಕೊರೆತ, ಬೈಂದೂರು ಮೇಲ್ಸೆತುವೆ ಹಾಗೂ ಕೆರಾಡಿ ದತ್ತುಗ್ರಾಮಕ್ಕೆ ಅನುದಾನ ಬಿಡುಗಡೆ ಮುಂತಾದ ವಿಷಯಗಳ ಬಗೆಗೆ ಮನವಿ ಸಲ್ಲಿಸಿತು.

ಮರವಂತೆಯಲ್ಲಿ ಕಡಲ್ಕೊರೆತದಿಂದ ರಸ್ತೆ ಹಾಗೂ ಮನೆಗಳನ್ನು ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದು ಕಡಲ್ಕೊರೆತಕ್ಕೆ ಸೂಕ್ತ ವ್ಯವಸ್ಥೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು. ಬೈಂದೂರು ವೃತ್ತದಲ್ಲಿ ಅಂಡರ್ ಪಾಸ್ ಮಾಡಲು ರಾಷ್ಟೀಯ ಹೆದ್ದಾರಿಯವರು ಯೋಚಿಸಿದ್ದು ಸದರಿ ಯೋಜನೆಯನ್ನು ಕೈಬಿಟ್ಟು ಮೇಲ್ಸೆತುವೆ ಒಪ್ಪಿಗೆ ನೀಡುವಂತೆ ಶೀಪಾರಸ್ಸು ಮಾಡುವುದು ಹಾಗೂ ಕೆರಾಡಿ ದತ್ತು ಗ್ರಾಮಕ್ಕೆ ವಾರಾಹಿ ಯೋಜನೆಯಡಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಲಾಯಿತು.

ಮನವಿಗೆ ಸ್ಪಂದಿಸಿದ ಸಂಸದ ಬಿ.ಎಸ್. ಯಡಿಯೂರಪ್ಪ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದು ಕಡಲ್ಕೋರೆತ, ಅಂಡರ್ ಪಾಸ್ ಸಮಸ್ಯೆಗಳ ಬಗೆಗೆ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಂಕರ ಪೂಜಾರಿ, ಸುರೇಶ ಬಟ್ವಾಡಿ, ತಾರನಾಥ ಶೆಟ್ಟಿ, ಶೋಭಾ ಪುತ್ರನ್, ತಾ.ಪಂ ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಮಾಲಿನಿ, ಕರಣ್ ಕುಮಾರ್ ಪೂಜಾರಿ, ಶ್ಯಾಮಲಾ ಕುಂದರ್, ಪಂಚಾಯತ್ ಸದಸ್ಯರಾದ ಸುದರ್ಶನ್ ಶೆಟ್ಟಿ, ಬೈಂದೂರು ಮಂಡಲದ ಅಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ, ಶಕ್ತಿಕೇಂದ್ರ ಅಧ್ಯಕ್ಷರಾದ ರಾಮಚಂದ್ರ ಮಂಜ, ಶಿವರಾಜ್ ಪೂಜಾರಿ, ಜಗನ್ನಾಥ ಮೊಗವೀರ, ಪ್ರಮುಖರಾದ ಸುಬ್ಬಣ್ಣ ಶೆಟ್ಟಿ ಆಲೂರು, ಚಿತ್ತರಂಜನ್ ಹೆಗ್ಡೆ ಹರ್ಕೂರು, ಚಂದ್ರಯ್ಯ ಆಚಾರ್ ಕಳಿ, ಆನಂದ ಖಾರ್ವಿ, ದಿನೇಶ್ ಶಿರೂರು, ಜಯರಾಮ್ ಶೆಟ್ಟಿ ಸಬ್ಲಾಡಿ, ಹರ್ಷ ಶೆಟ್ಟಿ, ನಾರಾಯಣ ನಾಯ್ಕ ನೇರಳಕಟ್ಟೆ, ರವಿ ಗಾಣಿಗ ಕೆಂಚನೂರು, ನಾಗರಾಜ ಶೆಟ್ಟಿ ಹರ್ಕುರು, ಕೆರಾಡಿ ಪಂಚಾಯತ್ ಅಧ್ಯಕ್ಷರಾದ ಸಂತೋಷ ಕೊಠಾರಿ, ಪ್ರಿಯಾದರ್ಶಿನಿ ದೇವಾಡಿಗ, ದೀಪಾ ಶೆಟ್ಟಿ, ಮರವಂತೆ ರಾಮಮಂದಿರ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ ಹಾಗೂ ಸದಸ್ಯರು ಉಪಸ್ಥಿತಯಿದ್ದರು.

Exit mobile version