Kundapra.com ಕುಂದಾಪ್ರ ಡಾಟ್ ಕಾಂ

ನ್ಯೂನ್ಯತೆ ಮೆಟ್ಟಿನಿಲ್ಲುವ ಛಲವಿದ್ದರೆ ಸಾಧನೆ ಸಾಧ್ಯ: ನೇರಂಬಳ್ಳಿ ರಾಘವೇಂದ್ರ ರಾವ್

?????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಕಲತೆಯಿಂದ ಕುಗ್ಗಿದರೆ ಸಮಾಜ ನಮ್ಮನ್ನು ಮತ್ತಷ್ಟು ಕುಗ್ಗಿಸುತ್ತದೆ. ನ್ಯೂನ್ಯತೆ ಮೆಟ್ಟಿನ ನಿಂತು ಸಾಧನೆ ಮಾಡುವ ಛಲವಿಲದ್ದರೆ ಸಾಧನೆಯ ಉತ್ತಂಗಕ್ಕೆ ಏರುವ ಮೂಲಕ ಸಮಾಜ ಕೂಡಾ ನಮ್ಮ ಗುರುತಿಸುತ್ತದೆ. ನ್ಯೂನ್ಯತೆಯನ್ನು ಮೆಟ್ಟಿನಿಲ್ಲುವ ಛಲವಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಹೇಳಿದರು.

ಅವರು ಕುಂದಾಪುರ ಭಂಡಾರ್‌ಕಾರ್ರ‍್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜ್ ಹಳೆ ವಿದ್ಯಾರ್ಥಿ ಸಂಘ ವಾರ್ಷಿಕೋತ್ಸವ ನಿಮಿತ್ತ ಕಾಲೇಜ್ ಮಾಧವ ಮಂಟಪದಲ್ಲಿ ಆಯೋಜಿಸಿದ ಅಂತರ್ ಕಾಲೇಜ್ ಪ್ರತಿಭಾ ಸ್ಪರ್ಧೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸರಕಾರದ ಸಹಾಯ ಮಾಡುವುದೆಂದು ಕುಳಿತುಕೊಳ್ಳದೇ ನಮ್ಮಿಂದ ಸಮಾಜಕ್ಕೆ ಸಾಧ್ಯವಾದಷ್ಟು ಸಹಕಾರ ನೀಡಬೇಕು. ಹಳೆ ವಿದ್ಯಾರ್ಥಿಗಳು ಕಾಲೇಜ್ ನೆರವಿಗೆ ಬರುವ ಮೂಲಕ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು ಎಂದು ಕರೆ ನೀಡಿದ ಅವರು ಕಾಲೇಜ್ ಉಚಿತ ಭೋಜನ ನಿಧಿಗೆ ಅರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.

ಭಂಡಾರ್‌ಕಾರ‍್ಸ್ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ ಇದ್ದರು. ಭಂಡಾರ್‌ಕಾರ‍್ಸ್ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ಥ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವಕೀಲ ರಾಘವೇಂದ್ರ ಚರಣ ನಾವಡ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಂಘ ಮಾಜಿ ಆಧ್ಯಕ್ಷರಾದ ಮಡಾಮಕ್ಕಿ ಶಶಿಧರ ಶೆಟ್ಟಿ, ಕೃಷ್ಣಾನಂದ ಚಾತ್ರ, ರಾಜೀವ ಕೋಟ್ಯಾನ್ ಅತಿಥಿಗಳ ಗೌರವಿಸಿದರು. ಸಂಘ ಕಾರ‍್ಯದರ್ಶಿ ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿ, ವಂದಿಸಿದರು.

 

Exit mobile version