ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವರದಿಗಾರಿಕೆ ಎಂಬುದು ಸುಲಭದ ಕಾರ್ಯವಲ್ಲ. ಅದರ ನಡುವೆ ಪುರಷರೇ ಬಹುಸಂಖ್ಯಾತರಿರುವ ಮಾಧ್ಯಮ ಕ್ಷೇತ್ರದಲ್ಲಿ ವಿರಳ ಸಂಖ್ಯೆಯಲ್ಲಿ ಮಹಿಳೆಯರು ದುಡಿಯುತ್ತಿದ್ದಾರೆ. ಅಪರೂಪಕ್ಕೆಂಬಂತೆ ಕುಂದಾಪುರದಲ್ಲಿ ಏಕೈಕ ಮಹಿಳಾ ವರದಿಗಾರರಾಗಿ ಅಶ್ವಿನಿ ಹಕ್ಲಾಡಿ ಅವರಂತವರು ದುಡಿಯುತ್ತಿರುವುದು ಪ್ರಶಂಸನೀಯ ಎಂದು ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಶಂಕರ ನಾಯ್ಕ ಮಾತನಾಡಿದರು.
ಬುಧವಾರ ಕೋಟೇಶ್ವರ ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಜಯ ಕರ್ನಾಟಕ ಕುಂದಾಪುರ ಪತ್ರಕರ್ತೆ ಅಶ್ವಿನಿ ಹಕ್ಲಾಡಿ ಅವರನ್ನು ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಶಂಕರ ನಾಯ್ಕ ಸನ್ಮಾನಿಸಿ ಮಾತನಾಡಿದರು. ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಅರುಣ್ ದೇವಾಡಿಗ ವಕ್ವಾಡಿ, ಮಾಜಿ ಅಧ್ಯಕ್ಷ ರಾಘವೇಂದ್ರ ಎಸ್ ಬೀಜಾಡಿ, ರೋಟರ‍್ಯಾಕ್ಟ್ ಸದಸ್ಯ ಸಂತೋಷ ಬಳ್ಕೂರು, ಕೃಷ್ಣ, ಮಿತ್ರಸಂಗಮ ಬೀಜಾಡಿ ಗೋಪಾಡಿ ಉಪಾಧ್ಯಕ್ಷ ಗಿರೀಶ್ ಬೀಜಾಡಿ, ಕುಂದಾಪುರ ಮೊಗವೀರ ಸಂಘಟನೆ ಅಧ್ಯಕ್ಷ ರಮೇಶ್ ಟಿ, ಮೊಗವೀರ ಸಂಘಟನೆ ಕಚೇರಿ ಸಿಬ್ಬಂಧಿ ಶಕೀಲಾ ಉಪಸ್ಥಿತರಿದ್ದರು.