ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ ನೃತ್ಯ ಸ್ಪರ್ಧೆಯು ದಿನಾಂಕ ಸಮರೊಪಗೊಂಡಿತು. ಶಾಸ್ತ್ರೀಯ ಏಕವ್ಯಕ್ತಿ ನ್ರತ್ಯ ಸ್ಪರ್ಥೆಯಲ್ಲಿ ಪ್ರಥಮ ಸ್ಥಾನ ಎಂ.ಜಿ.ಎಂ ಕಾಲೇಜು, ಉಡುಪಿ,ದ್ವಿತೀಯ ಸ್ಥಾನ ಪಿ.ಪಿ.ಸಿ ಕಾಲೇಜು, ಉಡುಪಿ ಹಾಗೂ ತ್ರತೀಯ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡಬಿದ್ರೆ ಪಡೆದುಕೊಂಡಿತು. ಹಾಗೆಯೇ ಜಾನಪದ ಗುಂಪು ನೃತ್ಯ ಸ್ಪರ್ಥೆಯಲ್ಲಿ ಪ್ರಥಮ ಸ್ಥಾನ ಆಳ್ವಾಸ್ ಕಾಲೇಜು, ಮೂಡಬಿದ್ರೆ, ದ್ವಿತೀಯ ಸ್ಥಾನ ಎಂ.ಜಿ.ಎಂ ಕಾಲೇಜು, ಉಡುಪಿ ಹಾಗೂ ತ್ರತೀಯ ಸ್ಥಾನವನ್ನು ಲಕ್ಷ್ಮೀ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜು ಕೋಟ ಪಡೆದುಕೊಂಡಿತು.
ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಅಧ್ಯಕ್ಷ ಪ್ರೊ.ಬಿ.ಉದಯ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳಿಗೆ ದೂರದ್ರಷ್ಟಿ ಇರಬೇಕು. ಶಿಕ್ಷಣದ ಜೊತೆಗೆ ಸಮಾಜ ಕಟ್ಟುವ ಕಾರ್ಯವಾಗಬೇಕು ಓದು ಬದುಕು ಕಟ್ಟುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಎಮ್. ಸುಕುಮಾರ್ ಶೆಟ್ಟಿ ವಿದ್ಯಾರ್ಥಿಗಳಿಗೆ ವಿದ್ಯಾವಂತರಾಗಿ ಜೊತೆಗೆ ಸಾಂಸ್ಕೃತಿಕವಾಗಿ ಬೆಳೆದು ಬಂದ ಕಲೆಗಳಲ್ಲಿ ತೊಡಗಿಸಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಶ್ರೀ ಸೀತರಾಮ ನಕ್ಕತ್ತಾಯ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದೋಮ ಚಂದ್ರಶೇಖರ್, ತೀರ್ಪುಗಾರರಾದ ಉದಯ್ ಶೆಟ್ಟಿ, ಗಣೇಶ್ ಗಂಗೊಳ್ಳಿ, ಶಂಕರ್ ದಾಸ್, ಕಾರ್ಯಕ್ರಮದ ಸಂಯೋಜಕರಾದ ಸ್ಪೂರ್ತಿ ಎಸ್ ಫೆರ್ನಾಂಡೀಸ್, ರಾಜೇಶ್ ಶೆಟ್ಟಿ ವಕ್ವಾಡಿ ಉಪಸ್ಥಿತರಿದ್ದರು. ರಕ್ಷಿತ್ ರಾವ್ ಗುಜ್ಜಾಡಿ ಸ್ವಾಗತಿಸಿ, ವಿಘ್ನೇಶ್ವರ್ ರಾವ್ ಅಥಿತಿಗಳನ್ನು ಪರಿಚಯಿಸಿದರು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮಹೇಶ್ ಬಾಬು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಚೇತನ್ ಶೆಟ್ಟಿ ಕೋವಾಡಿ ನಿರ್ವಹಿಸಿದರು.
► ಡಾ. ಬಿ. ಬಿ. ಹೆಗ್ಡೆ ಕಾಲೇಜು: ಅಂತರ್ ಕಾಲೇಜು ಮಟ್ಟದ ನೃತ್ಯ ಸ್ಪರ್ಧೆ ಉದ್ಘಾಟನೆ – http://kundapraa.com/?p=21949