Site icon Kundapra.com ಕುಂದಾಪ್ರ ಡಾಟ್ ಕಾಂ

ಶಾಲೆಯ ಬಳಿ ತಂಬಾಕು ಉತ್ಪನ್ನ ಮಾರಬೇಡಿ: ವರ್ತಕರಿಗೆ ವಿದ್ಯಾರ್ಥಿಗಳ ಮನವಿ

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಶಾಲೆಯ ಸುತ್ತಮುತ್ತ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವಂತೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಸುತ್ತಮುತ್ತಲಿನ ಅಂಗಡಿಗಳಿಗೆ ತೆರಳಿ ಮನವಿ ಮಾಡಿಕೊಂಡರು.

ಶಾಲಾ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ನೇತೃತ್ವದಲ್ಲಿ ಶಾಲೆಯ ಸಮೀಪದ ಅಂಗಡಿಗಳಿಗೆ ತೆರಳಿದ ವಿದ್ಯಾರ್ಥಿಗಳು ಅಂಗಡಿ ಮಾಲಿಕರಿಗೆ ಗುಲಾಬಿ ಹೂವು ನೀಡಿ ತಂಬಾಕು ಮತ್ತು ತಂಬಾಕು ಉತ್ಪನ್ನ ಮಾರಾಟದಿಂದ ವಿದ್ಯಾರ್ಥಿಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ವಿವರಿಸಿ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂದು ಆಗ್ರಹಿಸಿದರು.

ಶಾಲೆಯ ಶಿಕ್ಷಕ ರಕ್ಷಕ ಸಮಿತಿಯ ಉಪಾಧ್ಯಕ್ಷ ಬಿ.ರಾಘವೇಂದ್ರ ಪೈ, ಶಾಲೆಯ ಶಿಕ್ಷಕರಾದ ಸುಜಾತಾ, ಶೋಭಾ, ದಿವ್ಯಶ್ರೀ, ಲಕ್ಷ್ಮೀ, ಜ್ಯೋತಿ, ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ ಉಪಸ್ಥಿತರಿದ್ದರು.

Exit mobile version