Kundapra.com ಕುಂದಾಪ್ರ ಡಾಟ್ ಕಾಂ

ರಾಪ್ಟ್ರೀಯ ಜ್ಯೂನಿಯರ್ ಕರಾಟೆ ಪಟು ಸನಿಯಾ ಖಾರ್ವಿಗೆ ಸನ್ಮಾನ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಫೋರ್ಟ್ಸ್ ಕ್ಲಬ್‌ನ ೩೩ನೇ ವಾರ್ಷಿಕೋತ್ಸವ ಸಮಾರಂಭ ಗಂಗೊಳ್ಳಿ ಕೆ.ಎಫ್.ಡಿ.ಸಿ ವಠಾರದಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಂಗೊಳ್ಳಿ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ರಮೇಶ ಕುಂದರ್ ಮಾತನಾಡಿ ನಮ್ಮೂರಿನ ಶಾಲಾ ಕಾಲೇಜುಗಳಿಂದ ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಅವರ ಬೆಳವಣಿಗೆ ಸಹಕರಿಸಬೇಕು. ಗ್ರಾಮದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿಠಲ ವಿ.ಗಾಂವಕರ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮದನ ಕುಮಾರ ಹಾಗೂ ಮತ್ಸ್ಯೋದ್ಯಮಿ ಜಿ.ಟಿ.ಮಂಜುನಾಥ ಶುಭ ಹಾರೈಸಿದರು. ಇದೇ ಸಂದರ್ಭ ರಾಪ್ಟ್ರೀಯ ಜ್ಯೂನಿಯರ್ ಕರಾಟೆ ಪಟು ಕುಂದಾಪುರದ ಸನಿಯಾ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಮೋಹನ ಖಾರ್ವಿ ಸ್ವಾಗತಿಸಿದರು. ಸಂಘದ ಶಿಕ್ಷಣನಿಧಿಯ ಗೌರವ ಸದಸ್ಯ ಜಿ.ಪುರುಷೋತ್ತಮ ಆರ್ಕಾಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಸತೀಶ ಜಿ. ಖಾರ್ವಿ ವರದಿ ವಾಚಿಸಿದರು. ರಾಧಾಕೃಷ್ಣ ಶ್ಯಾನುಭಾಗ ಬಹುಮಾನ ವಿಜೇತರ ಪಟ್ಟಿಯನ್ನು ಹಾಗೂ ಸ್ವಾತಿ ವಿದ್ಯಾರ್ಥಿ ವೇತನ ಪಟ್ಟಿಯನ್ನು ವಾಚಿಸಿದರು. ಜಿ.ಸುಧಾಕರ ಖಾರ್ವಿ ಹಾಗೂ ರಾಘವೇಂದ್ರ ಖಾರ್ವಿ ಅತಿಥಿಗಳನ್ನು ಗೌರವಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಖಾರ್ವಿ ವಂದಿಸಿದರು.

Exit mobile version