Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಹೋಳಿ ಮೆರವಣಿಗೆ. ಬಣ್ಣಗಳ ಓಕುಳಿಯಲ್ಲಿ ಮಿಂದೆದ್ದ ಜನ

?????????????

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಕೊಂಕಣಿ ಖಾರ್ವಿ ಸಮಾಜ ಬಾಂಧವರ ಬಹುದೊಡ್ಡ ಆಚರಣೆ ಹೋಳಿಯನ್ನು ವಾರಗಳ ಕಾಲ ಅದ್ದೂರಿಯಾಗಿ ಆಚರಿಸಲಾಗಿದ್ದು ಕೊನೆಯ ದಿನ ಹೋಳಿ ಓಕುಳಿ ಹಾಗೂ ಬೃಹತ್ ಪುರಮೆರವಣಿಗೆಯೊಂದಿಗೆ ಸಮಾಪನಗೊಂಡಿತು.

ಜನಪದ ವಾದ್ಯ ಗುಮಟೆ, ಚೆಂಡೆ ವಾದನ, ಹೋಳಿ ನೃತ್ಯ ಮನ ಸೆಳೆದರೇ, ಶಿವನ ಸ್ತಬ್ಧಚಿತ್ರ ಹೋಳಿ ಮೆರವಣಿಗೆಯ ಕಳೆ ಹೆಚ್ಚಿಸಿತು. ಎರಡು ತಾಸಿಗೂ ಮಿಕ್ಕಿ ನಡೆದ ಮೆರವಣಿಗೆಯಲ್ಲಿ ಕೊಂಕಣಿ ಖಾರ್ವಿ ಸಮಾಜದ ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಊರವರು ಪರಸ್ಪರ ಬಣ್ಣ ಎರಚಿಕೊಂಡು ಬಣ್ಣದ ಹಬ್ಬದ ರಂಗು ತುಂಬಿದರು. ಮೆರವಣಿಗೆಯುದ್ದಕ್ಕೂ ಮೊಳಗಿದ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಸಾರ್ವಜನಿಕರೂ ಕೂಡ ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಅಂತಾರಾಷ್ಟ್ರೀಯ ಎಫ್‌ಎಸ್‌ಎಲ್ ಸೇವಾ ಸಂಸ್ಥೆಯ ವಿದೇಶಿ ಸ್ವಯಂಸೇವಕರು ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಮೆರವಣಿಗೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು.

 

Exit mobile version