Site icon Kundapra.com ಕುಂದಾಪ್ರ ಡಾಟ್ ಕಾಂ

ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು): ವಿದ್ಯಾರ್ಥಿ ವೇತನ ವಿತರಣೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಕಾರ್ಮಿಕರ ಭವನದಲ್ಲಿ ನಡೆಯಿತು.

ಕುಂದಾಪುರ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಾಸೀರ್ ಹುಸೇನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ, ಇಂದು ಚಾಲಕರ ಮಕ್ಕಳು ತಮ್ಮಂತೆ ಚಾಲಕರಾಗಬೇಕೆಂದು ಯಾವ ತಣದೆಯು ಆಸೆ ಪಡೋದಿಲ್ಲ ಆದರೆ ಉನ್ನತ ಹುದ್ದೆಯಲ್ಲಿರುವ ತಂದೆ ತಾಯಿಯರು ತಮ್ಮ ಮಕ್ಕಳು ತಮ್ಮಂತೆ ಉನ್ನತ ಹುದ್ದೆಗೇರ ಬೇಕು ಎಂದು ಆಶೆ ಪಡುತ್ತಾರೆ.ಹಾಗಾಗಿ ಚಾಲಕರ ಮಕ್ಕಳಾದ ನೀವು ಒಳ್ಳೆಯ ವಿದ್ಯಾಭ್ಯಾಸ ಕಲಿತು ಮುಂದೆ ಒಳ್ಳೆಯ ಉದ್ಯೋಗದಲ್ಲಿ ಕೂರುವಂತಾರಗಬೇಕು ಮತ್ತು ಕ್ರೀಡೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕೆ.ಲಕ್ಷಮಣ ಬರೇಕಟ್ಟು ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಕುಂದಾಪುರ ಅಧ್ಯಕ್ಷ ಉದಯ ಗಾಂವ್ಕರ್, ಸಂಘ ಗೌರವಾಧ್ಯಕ್ಷ ಎಚ್.ಕರುಣಕರ, ಸಲಹೆಗಾರ ಚಂದ್ರ ವಿ., ವಿದ್ಯಾರ್ಥಿ ವೇತನ ಸಮಿತಿಯ ಸಂಚಾಲಕ ಮಲ್ಲಿಕಾರ್ಜುನ ಶೆಟ್ಟಿಗಾರ್, ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ವಿ., ಶೇಖರ ವಿ. ದೋಣಿಮ ಉಪಸ್ಥಿತರಿದ್ದರು. ರವಿ ವಿ.ಎಂ. ಸ್ವಾಗತಿಸಿದರು, ರಾಘವೇಂದ್ರ ನಿರೂಪಿಸಿ, ಕೋಶಾಧಿಕಾರಿ ಸಂತೋಷ ಕಲ್ಲಾಗರ ವಂದಿಸಿದರು.

Exit mobile version