Site icon Kundapra.com ಕುಂದಾಪ್ರ ಡಾಟ್ ಕಾಂ

ಭಂಡಾರ್‌ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ: ಖ್ಯಾತ ನಾಟಕ ಕಲಾವಿದರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭ ಹಾಗೂ ಅಂತರ ಕಾಲೇಜು ಪ್ರತಿಭಾ ಸ್ಪರ್ಧೆ ಸಂದರ್ಭದಲ್ಲಿ ದೇಶ ವಿದೇಶಗಳಲ್ಲಿ ಸಾವಿರಾರು ನಾಟಕ ಪ್ರದರ್ಶನ ನೀಡಿರುವ ಕುಂದಾಪುರ ರೂಪಕಲಾ ನಾಟಕ ತಂಡದ ಖ್ಯಾತ ನಾಟಕ ಕಲಾವಿದರಾದ ಸತೀಶ್ ಪೈ(ಕುಳ್ಳಪ್ಪು), ಅಶೋಕ್ ಶ್ಯಾನುಭಾಗ್, ಸಂತೋಷ ಪೈ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ| ಎನ್. ಪಿ. ನಾರಾಯಣ ಶೆಟ್ಟಿ, ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ (ನಿ)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ, ಕರ್ಣಾಟಕ ಬ್ಯಾಂಕ್ ಕುಂದಾಪುರ ಶಾಖೆಯ ಮುಖ್ಯ ಪ್ರಬಂಧಕ ರಮೇಶ್ ವೈದ್ಯ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಕಾರ್ತೀಕೇಯ ಮಧ್ಯಸ್ಥ, ಪೂರ್ವಾಧ್ಯಕ್ಷ ರಾಘವೇಂದ್ರಚರಣ ನಾವಡ, ಕಾರ್ಯದರ್ಶಿ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ ಉಪಸ್ಥಿತರಿದ್ದರು.

Exit mobile version