Site icon Kundapra.com ಕುಂದಾಪ್ರ ಡಾಟ್ ಕಾಂ

ವಾರಾಹಿ ಕಾಲುವೆ ಒಡೆದು ಮನೆ, ಕೃಷಿ ಭೂಮಿಗೆ ನುಗ್ಗಿದ ನೀರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಾರಾಹಿ ಎಡದಂಡೆ ಕಾಲುವೆಯಲ್ಲಿ ನೀರಿನ ಒತ್ತಡ ಹೆಚ್ಚಿದ ಕಾರಣ ಎಡದಂಡೆಯ 26ನೇ ಕಿಲೋ ಮೀಟರ್‌ನಲ್ಲಿ ಕೊಯ್ಕಡಿ ಕೆಳಹೆಬ್ಟಾಗಿಲು ಎಂಬಲ್ಲಿ ನಾಲೆಯ ಕೆಳಭಾಗದ ಟರ್ಫ್‌ ಒಡೆದು ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ.

ಈ ಪ್ರದೇಶದಲ್ಲಿ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಕಾಲುವೆ ಅಡಿಭಾಗ ಕುಸಿಯಿತು. ರಭಸದಿಂದ ಹರಿಯುತ್ತಿದ್ದ ನೀರು ಕಾಲುವೆಯ ಅಡಿಯಿಂದ ತಿರುವು ಪಡೆದು ಸಮೀಪದ ನೈಸರ್ಗಿಕ ತೋಡುಗಳ ಮೂಲಕ ಹರಿದು ಕೃಷಿಭೂಮಿಗೆ ನುಗ್ಗಿದೆ. ಪರಿಸರದ ನೂರಾರು ಎಕರೆ ಪ್ರದೇಶದ ಜಮೀನುಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿ ನಿಂತಿದೆ. ಕೆಳಹೆಬ್ಟಾಗಿಲು ಮನೆಯ ಕೊಯ್ಕಡಿ ಬೇಬಿ ಶೆಟ್ಟಿ ಅವರ ಮನೆಗೂ ನೀರು ನುಗ್ಗಿದೆ.

ಕಳೆದ ನಾಲ್ಕು ದಿನಗಳಿಂದ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಬಗ್ಗೆ ವಾರಾಹಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಮೊಳಹಳ್ಳಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಉದಯ ಕುಲಾಲ್‌, ಜಿಲ್ಲಾ ಪಂಚಾಯತ್‌ ಸದಸ್ಯೆ ಸುಪ್ರೀತಾ ಕುಲಾಲ್‌, ತಾ.ಪಂ. ಅಧ್ಯಕ್ಷೆ ಜಯಶ್ರೀ ಮೊಗವೀರ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಈ ಹಿಂದೆ 2015ರಲ್ಲಿ ಮೊಳಹಳ್ಳಿ ಗ್ರಾಮದ ಬಾಸ್ಬೆ$çಲು ಮಠದ 23ನೇ ಕಿ.ಮೀ. ಪ್ರದೇಶದಲ್ಲಿ ಕಾಲುವೆ ಒಡೆದು ಪಕ್ಕದ ಕೃಷಿಭೂಮಿಗೆ ನೀರುನುಗ್ಗಿ ಅಪಾರ ಪ್ರಮಾಣದ ಕೃಷಿ ಹಾನಿಯಾಗಿತ್ತು. ಸುಮಾರು ಆರು ಎಕರೆಗೂ ಹೆಚ್ಚು ವಿಸ್ತಾರದ ಅಡಿಕೆ ತೋಟಕ್ಕೆ ಶೇಡಿ ಮಿಶ್ರಿತ ನೀರು ನುಗ್ಗಿ ನಾಟಿ ಮಾಡಿದ ಕೃಷಿಭೂಮಿ, ಬಾಳೆ ತೋಟಕ್ಕೆ ಹಾನಿಯಾಗಿತ್ತು.

 

Exit mobile version